ವಡೋದರ: ಚಲಿಸುತ್ತಿದ್ದ ಸ್ಕೂಲ್ ವ್ಯಾನ್ ನಿಂದ ವಿದ್ಯಾರ್ಥಿನಿಯರಿಬ್ಬರು ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ ನ ವಡೋದರಾದಲ್ಲಿ ನಡೆದಿದೆ.
ಮಾರುತಿ ಇಕೋ ವಾಹನದಲ್ಲಿ ಶಾಲಾ ಮಕ್ಕಳನ್ನು ಕರೆತರಲಾಗುತ್ತಿತ್ತು. ಈ ವೇಳೆ ವಿದ್ಯಾರ್ಥಿನಿಯರಿಬ್ಬರು ವ್ಯಾನ್ ನ ಹಿಂದಿನ ಬಾಗಿನಿಂದ ರಸ್ತೆಗೆ ಬಿದ್ದಿದ್ದಾರೆ. ಓರ್ವ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ತಕ್ಷಣ ಸ್ಥಳೀಯ ನಿವಾಸಿಗಳು ವಿದ್ಯಾರ್ಥಿನಿಯರನ್ನು ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ವ್ಯಾನ್ ನಿಂದ ಬಾಲಕಿಯರಿಬ್ಬರೂ ರಸ್ತೆಗೆ ಬಿದ್ದ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರ್ ಆಗಿದೆ.
ಚಾಲಕನ ಬೇಜವಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ಪ್ರಕರಣ ಸಂಬಂಧ ವ್ಯಾನ್ ಚಾಲಕನನ್ನು ವಡೋದರಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರತೀಕ್ ಪಡಿಯಾರ್ ಬಂಧಿತ ಚಾಲಕ ಎಂದು ಗುರುತಿಸಲಾಗಿದೆ.