
ಕೋಲಾರ: ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಸ್ವಾಮೀಜಿಯನ್ನೇ ಹತ್ಯೆಗೈದಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಆನಂದ ಮಾರ್ಗ ಆಶ್ರಮದಲ್ಲಿ ನಡೆದಿದೆ.
ಆಚಾರ್ಯ ಚಿನ್ಮಯಾನಂದ ಸ್ವಾಮೀಜಿಯನ್ನು ಮಾಲೂರಿನ ಸಂತಹಳ್ಳಿಯಲ್ಲಿರುವ ಆನಂದ ಮಾರ್ಗ ಆಶ್ರಮದಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಚಾರ್ಯ ಧರ್ಮ ಪ್ರಾಣಾನಂದ ಅವರ ಗುಂಪಿನಿಂದ ಈ ಕೊಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಆಚಾರ್ಯ ಧರ್ಮ ಪ್ರಾಣಾನಂದ ಹಾಗೂ ಆಚಾರ್ಯ ಚಿನ್ಮಯಾನಂದ ಸ್ವಾಮೀಜಿಗಳ ಬೆಂಬಲಿಗರ ಗುಂಪಿನ ನಡುವೆ ಗಲಾಟೆಯಾಗಿದ್ದು, ಧರ್ಮಪ್ರಾಣಾನಂದ ಸ್ವಾಮೀಜಿ ಬೆಂಬಲಿಗರ ಗುಂಪಿನಿಂದ ಚಿನ್ಮಯಾನಂದ ಸ್ವಾಮೀಜಿ ಹತ್ಯೆಯಾಗಿದೆ.
ಮಾಲೂರು ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.