ರಷ್ಯಾದ ಸೋಚಿಯಲ್ಲಿ ಸಮುದ್ರದ ಭಾರೀ ಅಲೆಗಳ ಹೊಡೆತಕ್ಕೆ ಪತ್ನಿ ಕೊಚ್ಚಿಹೋಗಿದ್ದು ಜೊತೆಯಲ್ಲಿದ್ದ ಪತಿ ಗೋಳಾಡಿದ್ದಾರೆ. ನೆಟ್ಟಿಗರನ್ನು ಬೆಚ್ಚಿಬೀಳಿಸುವ ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜೂನ್ 16 ರಂದು 20 ವರ್ಷದ ಮಹಿಳೆ ತನ್ನ ಪತಿಯೊಂದಿಗೆ ಬೀಚ್‌ನಲ್ಲಿ ಸಮಯ ಕಳೆದುತ್ತಿದ್ದಾಗ ಈ ಘಟನೆ ನಡೆದಿದೆ.
ವೈರಲ್ ವಿಡಿಯೋದಲ್ಲಿ ದಂಪತಿ ಬೀಚ್‌ನಲ್ಲಿ ಕೈ ಹಿಡಿದುಕೊಂಡು ಒಬ್ಬರನ್ನೊಬ್ಬರು ಚುಡಾಯಿಸುತ್ತಿರುವುದನ್ನು ತೋರಿಸುತ್ತದೆ. ಮೊದಲು ಬಲವಾದ ಅಲೆಗಳು ಏಳುತ್ತವೆ. ಪತಿ ಈ ವೇಳೆ ಪತ್ನಿಯನ್ನು ತಬ್ಬಿಕೊಂಡು ಆಕೆಯನ್ನು ರಕ್ಷಿಸುತ್ತಾ ತನ್ನನ್ನೂ ಸುರಕ್ಷಿತಗೊಳಿಸಿಕೊಳ್ಳುತ್ತಾನೆ.
ಆದರೆ ಪ್ರಬಲ ಅಲೆಗಳು ಮತ್ತೆ ಏಳುತ್ತವೆ. ಈ ವೇಳೆ ಮಹಿಳೆ ಅಲೆಯ ಹೊಡೆತಕ್ಕೆ ಪತಿಯಿಂದ ದೂರವಾಗುತ್ತಾಳೆ. ಆಕೆಯನ್ನು ರಕ್ಷಿಸುವ ಪತಿಯ ಯತ್ನ ವಿಫಲವಾಗಿ ಪತ್ನಿ ಅಲೆಯ ಹೊಡೆತದಲ್ಲಿ ಕೊಚ್ಚಿಹೋಗುತ್ತಾಳೆ. ಇದರಿಂದ ಕಂಗಾಲಾದ ಪತಿ ಆಕೆಗಾಗಿ ಹುಡುಕಾಡುತ್ತಾನೆ.
ರಷ್ಯಾದ ಲಿಪೆಟ್ಸ್ಕ್ ನಗರದಿಂದ ಬಂದಿದ್ದ ದಂಪತಿ ಸಮುದ್ರ ತೀರಕ್ಕೆ ಭೇಟಿ ನೀಡಿದಾಗ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.
“ಬೃಹತ್ ಅಲೆಗಳು ಅಪರಿಚಿತ 20 ವರ್ಷದ ಮಹಿಳೆಯನ್ನು ಕೊಚ್ಚಿಕೊಂಡು ಹೋಗಿದೆ. ಅವಳನ್ನು ಉಳಿಸಲು ಪತಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಕೆಯನ್ನು ಪತ್ತೆಮಾಡುವ ಕೆಲಸ ಮುಂದುವರಿಯುತ್ತಿದೆ” ಎಂದು ಕಾರ್ಯಾಚರಣೆ ತಂಡ ತಿಳಿಸಿದೆ.
ವರದಿಗಳ ಪ್ರಕಾರ ರಕ್ಷಣಾ ತಂಡ ರಿವೇರಿಯಾ ಬೀಚ್‌ನಿಂದ ಮಮೈಕಾ ಮೈಕ್ರೋಡಿಸ್ಟ್ರಿಕ್ಟ್ ಗೆ ಹುಡುಕಾಟ ಕಾರ್ಯಾಚರಣೆಯನ್ನು ವಿಸ್ತರಿಸಿದೆ.
Woman gets swept out to sea as her boyfriend frantically tries to help save her in Sochi, Russia.
Devastating.
The incident reportedly happened while the couple was visiting from the Russian city of Lipetsk.
The couple could be seen going to the water's edge when massive waves… pic.twitter.com/zEaFXoDjkg
— Collin Rugg (@CollinRugg) June 18, 2024