ಸೌದಿ ಅರೇಬಿಯಾದಲ್ಲಿ ಬಿಸಿಲಿನ ತಾಪಕ್ಕೆ 920 ಕ್ಕೂ ಹೆಚ್ಚು ಹಜ್ ಯಾತ್ರಿಕರು ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.
ಭಾರತ ಮೂಲದ 90 ಮಂದಿ ಹಾಗೂ ಬೆಂಗಳೂರಿನ ಇಬ್ಬರು ಸೇರಿದಂತೆ ತಾಪಕ್ಕೆ 920 ಕ್ಕೂ ಹೆಚ್ಚು ಹಜ್ ಯಾತ್ರಿಕರು ಬಲಿಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ವರದಿಯ ಪ್ರಕಾರ, ಬಿಸಿಗಾಳಿ ಮತ್ತು ಶಾಖದ ಹೊಡೆತದಿಂದ ಸಾವನ್ನಪ್ಪಿದವರ ಸಂಖ್ಯೆ 900 ದಾಟಿದೆ ಮತ್ತು 1,400 ಹಜ್ ಯಾತ್ರಿಕರು ಕಾಣೆಯಾಗಿದ್ದಾರೆ. ಮೃತಪಟ್ಟವರಲ್ಲಿ 600 ಮಂದಿ ಈಜಿಪ್ಟಿನವರು ಮತ್ತು 68 ಭಾರತೀಯ ಹಜ್ ಯಾತ್ರಿಕರು ಸಹ ಸಾವನ್ನಪ್ಪಿದ್ದಾರೆ ಎಂದು ಅರಬ್ ಅಧಿಕಾರಿಗಳು ವರದಿ ಮಾಡಿದ್ದಾರೆ. ಸೌದಿ ಅರೇಬಿಯಾದಲ್ಲಿ ಸುಡುವ ಬಿಸಿಲಿನ ನಡುವೆ ಹಜ್ ಯಾತ್ರಿಕರು ಮೆಕ್ಕಾ ಮತ್ತು ಮದೀನಾಗೆ ಪ್ರಯಾಣಿಸುತ್ತಿದ್ದಾರೆ. ಇಸ್ಲಾಮಿನ ಪವಿತ್ರ ನಗರವಾದ ಮೆಕ್ಕಾಗೆ ಈವರೆಗೆ ಸುಮಾರು 1.8 ಮಿಲಿಯನ್ ಜನರು ಭೇಟಿ ನೀಡಿದ್ದಾರೆ ಎಂದು ವರದಿ ಹೇಳುತ್ತದೆ.
ಸೋಮವಾರ ತಾಪಮಾನ 51.8 ಡಿಗ್ರಿ ಸೆಲ್ಸಿಯಸ್ ತಲುಪಿತ್ತು. ಬುಧವಾರ, ಭಾರಿ ಹೀಟ್ ನಿಂದ ಸಾವನ್ನಪ್ಪಿದವರ ಸಂಖ್ಯೆ 900 ದಾಟಿದೆ ಎಂದು ವರದಿ ಬಹಿರಂಗಪಡಿಸಿದೆ. ಮೃತರಲ್ಲಿ 600 ಮಂದಿ ಈಜಿಪ್ಟ್ ಮೂಲದವರಾಗಿದ್ದಾರೆ.