HomeKarnatakaಪೋಷಕರೇ ಇಲ್ನೋಡಿ…! ಐಸ್ ಕ್ರೀಂ ಆಸೆ ತೋರಿಸಿ ಬಾಲಕನ ಕಿಡ್ನಾಪ್, ಹಣಕ್ಕೆ ಬೇಡಿಕೆ: ಅಂತಿಮವಾಗಿ ರಕ್ಷಿಸಿದ...

ಪೋಷಕರೇ ಇಲ್ನೋಡಿ…! ಐಸ್ ಕ್ರೀಂ ಆಸೆ ತೋರಿಸಿ ಬಾಲಕನ ಕಿಡ್ನಾಪ್, ಹಣಕ್ಕೆ ಬೇಡಿಕೆ: ಅಂತಿಮವಾಗಿ ರಕ್ಷಿಸಿದ ಪೊಲೀಸರು

ಬೆಂಗಳೂರು: ಬಾಲಕನೊಬ್ಬನಿಗೆ ಐಸ್ ಕ್ರೀಂ ಆಸೆ ತೋರಿಸಿ ಅಪಹರಿಸಿದ ಘಟನೆ ನಡೆದಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಬಾಲಕನನ್ನು ರಕ್ಷಿಸಿದ್ದಾರೆ.

ಅಪಹರಣಕಾರನನ್ನ ಬಂಧಿಸಿದ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ರಾಜಸ್ಥಾನ ದಂಪತಿಯ 9 ವರ್ಷದ ಪುತ್ರನನ್ನು ರಕ್ಷಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡತೋಗೂರು ಸಮೀಪ ಘಟನೆ ನಡೆದಿದೆ. ಐಸ್ ಕ್ರೀಂ ಕೊಡಿಸುವ ಆಮಿಷವೊಡ್ಡಿ ನಿನ್ನೆ ಸಂಜೆ ಬಾಲಕನನ್ನು ಅಪಹರಿಸಲಾಗಿತ್ತು. ಮೊಹಮ್ಮದ್ ಜಶಿಮುದ್ದೀನ್ ಶೇಕ್(24) ಎಂಬಾತ ಬಾಲಕನ ಅಪಹರಿಸಿದ್ದಲ್ಲದೇ, ಪೋಷಕರಿಗೆ ಕರೆ ಮಾಡಿ 10 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದ. ಹಣ ಕೊಡದಿದ್ದರೆ ನಿಮ್ಮ ಮಗನನ್ನು ಬಿಡುವುದಿಲ್ಲ ಎಂದು ಹೇಳಿದ್ದ.

ಮಗನ ಅಪಹರಣದ ಬಗ್ಗೆ ಪೋಷಕರು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕಾರ್ ನಲ್ಲಿ ಬಾಲಕನನ್ನು ಕೂರಿಸಿಕೊಂಡು ವೀರಸಂದ್ರ, ಹುಸ್ಕೂರು ಸುತ್ತಮುತ್ತ ಓಡಾಟ ನಡೆಸಿದ್ದ. ಪೊಲೀಸರ ಕಣ್ಣು ತಪ್ಪಿಸಲು ಕಾರ್ ನಲ್ಲಿ ಓಡಾಡುತ್ತಿದ್ದ. ಅಂತಿಮವಾಗಿ ಜಶೀಮುದ್ದೀನ್ ಶೇಕ್ ನನ್ನು ಬಂಧಿಸಿ ಬಾಲಕನನ್ನು ರಕ್ಷಿಸಲಾಗಿದೆ. ಬಾಲಕನನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular