HomeIndiaOMG : ಇದ್ದಕ್ಕಿದ್ದಂತೆ ಜನಪ್ರಿಯ ಗಾಯಕಿಗೆ ಕಿವಿಯೇ ಕೇಳ್ತಿಲ್ಲ ! ಏನಿದು ಅಪರೂಪದ ಖಾಯಿಲೆ..?

OMG : ಇದ್ದಕ್ಕಿದ್ದಂತೆ ಜನಪ್ರಿಯ ಗಾಯಕಿಗೆ ಕಿವಿಯೇ ಕೇಳ್ತಿಲ್ಲ ! ಏನಿದು ಅಪರೂಪದ ಖಾಯಿಲೆ..?

ಬಾಲಿವುಡ್ ನ ಜನಪ್ರಿಯ ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಅಪರೂಪದ ಸಂವೇದನಾ ನರ ಶ್ರವಣ ನಷ್ಟದಿಂದ ಬಳಲುತ್ತಿದ್ದಾರೆ.

ಕೆಲವು ವಾರಗಳ ಹಿಂದೆ ತನಗೆ ಸರಿಯಾಗಿ ಕಿವಿ ಕೇಳುತ್ತಿರಲಿಲ್ಲ, ಆದ್ದರಿಂದ 10 ದಿನ ನಿಮ್ಮ ಸಂಪರ್ಕಕ್ಕೆ ಬಂದಿರಲಿಲ್ಲ. ನಂತರ ವೈದ್ಯರಿಗೆ ತೋರಿಸಿದಾಗ ಇದನ್ನು ವೈದ್ಯರು ಅಪರೂಪದ ಕಿವುಡುತನ ಎಂದು ರೋಗನಿರ್ಣಯ ಮಾಡಿರುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಗಾಯಕಿ ಅಲ್ಕಾ ಯಾಗ್ನಿಕ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವೈದ್ಯರು ಈ ಅಪರೂಪದ ಶ್ರವಣ ನಷ್ಟದ ಕಾರಣವನ್ನು ಪತ್ತೆಹಚ್ಚಿದರು. ಇದು ವೈರಲ್ ದಾಳಿಯಿಂದ ಉಂಟಾಗುತ್ತದೆ ಎಂದು ಹೇಳಿದರು. ಈ ಬಗ್ಗೆ ನನಗೆ ತಿಳಿದಿರಲಿಲ್ಲ. ನಾನು ಈ ಸಮಸ್ಯೆಯನ್ನು ಎದುರಿಸಲು ಪ್ರಯತ್ನಿಸುತ್ತಿದ್ದೇನೆ, ದಯವಿಟ್ಟು ನನ್ನ ಬಗ್ಗೆ ಕೂಡ ಪ್ರಾರ್ಥಿಸಿ ಎಂದು ಗಾಯಕಿ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular