ಭಾರತೀಯ ಚಿತ್ರರಂಗದಲ್ಲಿ ಕಾಜಲ್ ಅಗರ್ವಾಲ್ ಬಗ್ಗೆ ಇಂದು ಹೆಚ್ಚೇನು ಹೇಳಬೇಕಾಗಿಲ್ಲ. ಬಾಲಿವುಡ್, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ನಟನಾ ಕೌಶಲ್ಯವನ್ನು ಸಾಬೀತುಪಡಿಸಿರುವ ಈ ಸುಂದರ ಚೆಲುವೆ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಕಿಸ್ಸಿಂಗ್ ಸೀನ್ ನಲ್ಲಿ ಅಭಿನಯಿಸಿದಾಗ ಕಣ್ಣೀರು ಹಾಕಿ ಸಿನಿಮಾ ಸೆಟ್ ನಿಂದ ಓಡಿಹೋಗಿದ್ದರಂತೆ.
ಸದ್ಯ ಅವರ ‘ಸತ್ಯಭಾಮ’ ಸಿನಿಮಾ ತೆರೆಕಂಡಿದ್ದು, ಇದರಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕಾಜಲ್ ನೀಡಿದ ಹೇಳಿಕೆಯಿಂದ ಗಮನ ಸೆಳೆದಿದ್ದಾರೆ. ಹಿಂದಿ ಚಿತ್ರರಂಗಕ್ಕೆ ಹೋಲಿಸಿದರೆ ದಕ್ಷಿಣದಲ್ಲಿ ವಿಷಯಗಳು ವಿಭಿನ್ನವಾಗಿವೆ ಎಂದು ಕಾಜಲ್ ಒಪ್ಪಿಕೊಂಡಿದ್ದಾರೆ.
ಈ ನಡುವೆ 2016 ರಲ್ಲಿ ‘ದೋ ಲಫ್ಝೋನ್ ಕಿ ಕಹಾನಿ’ ಚಿತ್ರದಲ್ಲಿ ನಟಿ ಕಾಜಲ್, ರಣದೀಪ್ ಹೂಡಾ ಜೊತೆ ಕೆಲಸ ಮಾಡಿದ್ದರು. ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಕಿಸ್ಸಿಂಗ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ತನ್ನ 45ನೇ ಚಿತ್ರದಲ್ಲಿ ಅವರು ಕಿಸ್ಸಿಂಗ್ ಸೀನ್ ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರಂತೆ. ಆದರೆ ದೋ ಲಫ್ಝೋನ್ ಕಿ ಕಹಾನಿ ಚಿತ್ರದ ಸೆಟ್‌ನಲ್ಲಿ ರಣದೀಪ್ ಹೂಡಾ ಮುತ್ತು ಕೊಟ್ಟಾಗ ಆಕೆ ಉದ್ವೇಗಗೊಂಡು ಅಳಲು ಪ್ರಾರಂಭಿಸಿದರು ಎಂಬುದು ಮೂಲಗಳಿಂದ ಗೊತ್ತಾಗಿದೆ .
ಈ ಚಿತ್ರದಲ್ಲಿ ರಣದೀಪ್ ಮತ್ತು ಕಾಜಲ್ ಅಗರ್ವಾಲ್ ಅವರ ಚುಂಬನದ ದೃಶ್ಯವನ್ನು ಚಿತ್ರೀಕರಿಸಲಾಗಿದೆ. ವರದಿಗಳ ಪ್ರಕಾರ ನಿರ್ದೇಶಕ ದೀಪಕ್ ತಿಜೋರಿ ಚುಂಬನದ ದೃಶ್ಯ ಚಿತ್ರೀಕರಿಸಲು ಪ್ಲಾನ್ ಮಾಡಿದ್ದು ಕಾಜಲ್ ಪ್ರತಿಕ್ರಿಯೆ ಬಗ್ಗೆ ಕುತೂಹಲ ಹೊಂದಿದ್ದರು. ಆದ್ದರಿಂದ ನಟಿಗೆ ಏನನ್ನೂ ಹೇಳಿರಲಿಲ್ಲ, ಆದರೆ ಈ ಬಗ್ಗೆ ರಣದೀಪ್ ಹೂಡಾಗೆ ಎಲ್ಲವೂ ತಿಳಿದಿತ್ತು . ಶಾಟ್ ಶುರುವಾದ ತಕ್ಷಣ ರಣದೀಪ್, ಕಾಜಲ್ ಗೆ ಹಠಾತ್ ಮುತ್ತು ಕೊಟ್ಟಾಗ ಕಾಜಲ್ ನರ್ವಸ್ ಆದರು. ಆದರೆ ಆಕೆಯ ಆತಂಕದ ಹೊರತಾಗಿಯೂ ರಣದೀಪ್ ಚುಂಬಿಸುತ್ತಲೇ ಇದ್ದರು. ಏಕೆಂದರೆ ಈ ವಿಷಯ ಎಲ್ಲರಿಗೂ ತಿಳಿದಿತ್ತು, ಅದಕ್ಕಾಗಿ ರಣದೀಪ್ ಕಿಸ್ ಮಾಡುತ್ತಲೇ ಇದ್ದರು. ಈ ಸಂದರ್ಭ ನೋಡಿ ಗಾಬರಿಗೊಂಡ ಕಾಜಲ್ ಕಟ್ ಹೇಳಿ ಸೆಟ್‌ನಿಂದ ನಿರ್ಗಮಿಸಿದರಂತೆ.
ಈ ದೃಶ್ಯದ ಬಗ್ಗೆ ದೀಪಕ್ ತಿಜೋರಿ ಆಕೆಗೆ ಸತ್ಯವನ್ನು ಹೇಳಿದಾಗ, ತುಂಬಾ ಕೋಪಗೊಂಡು ಕಿಸ್ಸಿಂಗ್ ಸೀನ್ ಮಾಡಲು ನಿರಾಕರಿಸಿ ಆ ದೃಶ್ಯವನ್ನು ತೆಗೆದು ಅದನ್ನು ಮರು ಶೂಟ್ ಮಾಡುವಂತೆ ನಿರ್ದೇಶಕರನ್ನು ಕೇಳಿಕೊಂಡಿದ್ದರಂತೆ. ಈ ದೃಶ್ಯದ ಬಗ್ಗೆ ದೀಪಕ್ ತಿಜೋರಿ ಮಾತನಾಡಿ, ನಾನು ತೆರೆಯ ಮೇಲೆ ಚುಂಬನದ ದೃಶ್ಯಗಳನ್ನು ಮಾಡುವುದಿಲ್ಲ ಎಂದು ಕಾಜಲ್ ಅಗರ್ವಾಲ್ ಹೇಳಿದ್ದು ನನಗೆ ನೆನಪಿದೆ. ಅವರು ದಕ್ಷಿಣ ಚಿತ್ರರಂಗದ ದೊಡ್ಡ ತಾರೆಯಾಗಿದ್ದು ಇದು ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಿದ್ದರು. ಆದರೆ ಅವರ ಅನುಮತಿಯಿಲ್ಲದೆ ನಟಿಯನ್ನು ನೋಯಿಸುವ ಅಥವಾ ಕಿಸ್ಸಿಂಗ್ ಸೀನ್ ಮಾಡುವ ಉದ್ದೇಶವಿರಲಿಲ್ಲ. ಸ್ಕ್ರಿಪ್ಟ್ ಪ್ರಕಾರ ಇದು ಇಬ್ಬರು ಪ್ರೇಮಿಗಳ ನಡುವಿನ ಕ್ಷಣವಾಗಿತ್ತು, ಅದರಂತೆ ರಣದೀಪ್ ಕೂಡ ನಟಿಸಿದರು ಎಂದಿದ್ದಾರೆ.
ಚಿತ್ರರಂಗಕ್ಕೆ ಬಂದಾಗಿನಿಂದಲೂ ಕಾಜಲ್ ಅಗರ್ವಾಲ್ ಚುಂಬನ ಮತ್ತು ನಟನೊಂದಿಗಿನ ಆತ್ಮೀಯ ದೃಶ್ಯಗಳಿಂದ ದೂರವಿದ್ದರು. ಆಕೆ ತನ್ನ ಇದುವರೆಗಿನ 45 ಚಿತ್ರಗಳಲ್ಲಿ ಕಿಸ್ಸಿಂಗ್ ಸೀನ್ ಮಾಡಿಲ್ಲ. ಈ ವಿಷಯದಲ್ಲಿ ಅವರು, ತೀರಾ ಅಗತ್ಯವಿಲ್ಲದ ಹೊರತು ತೆರೆಯ ಮೇಲೆ ಅನ್ಯೋನ್ಯವಾಗಿರುವುದು ನನಗೆ ಸರಿ ಎನಿಸಲಿಲ್ಲ ಎನ್ನುತ್ತಾರೆ.