HomeAutoViral Video | ಜನನಿಬಿಡ ರಸ್ತೆಯಲ್ಲೇ ಯುವಜೋಡಿಯ ವ್ಹೀಲಿಂಗ್ ಹುಚ್ಚಾಟ

Viral Video | ಜನನಿಬಿಡ ರಸ್ತೆಯಲ್ಲೇ ಯುವಜೋಡಿಯ ವ್ಹೀಲಿಂಗ್ ಹುಚ್ಚಾಟ

ರಸ್ತೆಗಳಲ್ಲಿ ಬೈಕ್ ಸ್ಟಂಟ್, ವ್ಹೀಲಿಂಗ್ ಮಾಡುವವರಿಗೆ ಪೊಲೀಸರು ಎಷ್ಟೇ ಎಚ್ಚರಿಕೆ ಕೊಟ್ರೂ ಅವರ ಹುಚ್ಚಾಟ ಮಾತ್ರ ಇನ್ನೂ ನಿಂತಿಲ್ಲ. ಬೆಂಗಳೂರಲ್ಲಿ ವ್ಹೀಲಿಂಗ್ ಹುಚ್ಚಾಟ ಮುಂದುವರೆದಿದ್ದು, ಯುವತಿಯನ್ನು ಹಿಂದೆ ಕೂರಿಸಿಕೊಂಡು ಯುವಕನೊಬ್ಬ ಜನನಿಬಿಡ ರಸ್ತೆಯಲ್ಲೇ ಅಪಾಯಕಾರಿ ವ್ಹೀಲಿಂಗ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬೈಕ್ ಸ್ಟಂಟ್ ಮಾಡುವ ವೇಳೆ ಇಬ್ಬರೂ ಹೆಲ್ಮೆಟ್ ಧರಿಸಿಲ್ಲ. ಬೈಕ್ ನ ಮುಂಬದಿಯಲ್ಲಿ ಕುಳಿತಿರುವ ಯುವಕ ಮುಂದಿನ ಚಕ್ರ ಮೇಲೆತ್ತಿ ವ್ಹೀಲಿಂಗ್ ಮಾಡುತ್ತಾ ಸ್ಟಂಟ್ ಪ್ರದರ್ಶಿಸಿದ್ದಾನೆ. ಆತನ ಹಿಂಬದಿಯಲ್ಲಿ ಕುಳಿತಿರುವ ಯುವತಿ ಭಯದಿಂದ ಯುವಕನ ಶರ್ಟನ್ನು ಬಿಗಿಯಾಗಿ ಹಿಡಿದು ಕುಳಿತಿದ್ದಾಳೆ.

ಕಳೆದ ವರ್ಷ ಸೆಪ್ಟೆಂಬರ್ 13 ರಂದು ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಸದ್ಯ ಎಲ್ಲರ ಗಮನ ಸೆಳೆಯುತ್ತಿದ್ದು 8 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular