ಮೈಸೂರು: ನಟ ದರ್ಶನ್ ಮೇಲಿನ ಕೊಲೆ ಆರೋಪ ಪ್ರಕರಣದಲ್ಲಿ ಯಾವ ಪ್ರಭಾವಿಗಳೂ ನನ್ನನ್ನು ಭೇಟಿಯಾಗಲು ಬಂದಿಲ್ಲ. ಬಿಜೆಪಿಯವರು ಬೇಕೆಂದೇ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಈ ನೆಲದ ಕಾನೂನಿನ ಪ್ರಕಾರ ನಡೆದುಕೊಳ್ಳುತ್ತೇವೆ. ಕಾನೂನು ರೀತಿ ಹೇಗೆ ತನಿಖೆಯಾಗಬೇಕು ಹಾಗೆಯೇ ಆಗುತ್ತದೆ, ಅದನ್ನು ಬಿಟ್ಟು ಬೇರೆ ಏನೂ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಪೊಲೀಸ್ ಠಾಣೆಯ ಸುತ್ತ ಶಾಮಿಯಾನ ಹಾಕಿರುವ ನಿರ್ಧಾರದ ಹಿಂದಿನ ಉದ್ದೇಶ ನನಗೂ ತಿಳಿದಿಲ್ಲ. ಪೊಲೀಸರು ನನಗೆ ಮಾಹಿತಿ ನೀಡಿ ತೀರ್ಮಾನ ಮಾಡಿಲ್ಲ. ಸಾಮಾನ್ಯ ಜನರಿಗಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಸಾಮಾನ್ಯ ಜನ ಹೇಗೆ ಹೇಳುತ್ತಾರೊ ಹಾಗೆ ಕೇಳುತ್ತೇವೆ ಎಂದು ಹೇಳಿದ್ದಾರೆ.