ನ್ಯೂಯಾರ್ಕ್‌ನ ನಸ್ಸೌ ಇಂಟರ್‌ನ್ಯಾಶನಲ್ ಕೌಂಟಿ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ವಿರುದ್ಧ ನಡೆದ T20 ವಿಶ್ವಕಪ್ 2024 ಪಂದ್ಯದಲ್ಲಿ ಯುಎಸ್ಎ ಆರಂಭಿಕ ಆಟಗಾರ ಸ್ಟೀವನ್ ಟೇಲರ್ ಹೊಡೆದ ಸಿಕ್ಸರ್ ಬಾಲ್ ಭದ್ರತಾ ಸಿಬ್ಬಂದಿಗೆ ಹೊಡೆದಿದ್ದು ವಿಡಿಯೋ ಇಂಟರ್ನೆಟ್ ನಲ್ಲಿ ಹರಿದಾಡ್ತಿದೆ.
ಐಸಿಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಭದ್ರತಾ ಅಧಿಕಾರಿ ಎದೆಗೆ ಬಾಲ್ ನ ಏಟು ಬಿದ್ದಿರೋದು ಸೆರೆಯಾಗಿದೆ.
ಈ ಘಟನೆಯು ಇನಿಂಗ್ಸ್‌ನ 9 ನೇ ಓವರ್‌ನಲ್ಲಿ ಸಂಭವಿಸಿತು. ಶಿವಂ ದುಬೆಯ ಶಾರ್ಟ್-ಪಿಚ್ ಎಸೆತದಲ್ಲಿ ಸ್ಟೀವನ್ ಟೇಲರ್ ಚೆಂಡನ್ನು ಸಿಕ್ಸರ್ ಹೊಡೆದರು. ಇದು ಪಿಚ್ ನ ಹೊರಗೆ ನಿಂತಿದ್ದ ಭದ್ರತಾ ಸಿಬ್ಬಂದಿಯ ಎದೆಗೆ ಬಡಿದಿದೆ. ಬಾಲ್ ತಮ್ಮ ಮೇಲೆ ಬೀಳಬಹುದೆಂದು ನಿರೀಕ್ಷಿಸದ ಭದ್ರತಾ ಸಿಬ್ಬಂದಿ ಚೆಂಡು ಎದೆ ಮೇಲೆ ಬೀಳುತ್ತಿದ್ದಂತೆ ಶಾಕ್ ಆದರು.