ಜೂನ್ 21ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಪುಷ್ಪರಾಜ್ ಮಾಲರ ಬೀಡು ನಿರ್ದೇಶನದ ಬಹು ನಿರೀಕ್ಷಿತ ಆರಾಟ ಚಿತ್ರದ ಟ್ರೈಲರ್ ಇದೆ ಜೂನ್ 15 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ.
ಈ ಚಿತ್ರದಲ್ಲಿ ರಂಜನ್ ಕಾಸರಗೋಡು ನಾಯಕನಟನಾಗಿದ್ದು ಇನ್ನುಳಿದಂತೆ ವೆನ್ಯಾ ರೈ, ಜ್ಯೋತಿಶ್ ಶೆಟ್ಟಿ, ಅನಿಲ್ ರಾಜ್ ಉಪ್ಪಳ, ಸುನಿಲ್ ನೆಲ್ಲಿಗುಡ್ಡೆ , ರವಿ ರಾಮಕುಂಜ, ಸಂದೀಪ್ ಭಕ್ ಮಣಿ. , ಉತ್ಸವ್ ವಾಮಂಜೂರ್, ನಯನಾ ಸಾಲಿಯಾನ್ ತೆರೆ ಹಂಚಿಕೊಂಡಿದ್ದಾರೆ. ಪಿ ಎನ್ ಆರ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿದ್ದು, ದಾಮು ಕನಸೂರ್ ಸಂಕಲನ, ರವಿ ಸುವರ್ಣ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನವಿದೆ. ಶಮೀರ್ ಮುಡಿಪು ಅವರ ಸಂಗೀತ ನಿರ್ದೇಶನವಿದೆ.