ಬೆಂಗಳೂರು : ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಹೌದು, ಪೂರ್ವ ಪ್ರಾಥಮಿಕ ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, 7 ಜಿಲ್ಲೆಗಳಲ್ಲಿ 1,008 ಪೂರ್ವ ಪ್ರಾಥಮಿಕ ಶಾಲೆಗಳು ಈ ವರ್ಷದಿಂದಲೇ ಆರಂಭಿಸಲು ಆದೇಶ ಹೊರಡಿಸಲಾಗಿದೆ.
ಬಳ್ಳಾರಿ- 119 ಶಾಲೆಗಳು, ಬೀದರ್ -98 ಶಾಲೆಗಳು, ಕೊಪ್ಪಳ-131 ಶಾಲೆಗಳು, ಕಲಬುರಗಿ-234 ಶಾಲೆಗಳು, ರಾಯಚೂರು- 190 ಶಾಲೆಗಳು, ವಿಜಯನಗರ- 142 ಶಾಲೆಗಳು, ಯಾದಗಿರಿಯಲ್ಲಿ 94 ಶಾಲೆಗಳು ಆರಂಭಗೊಳ್ಳಲಿವೆ.