HomeKarnatakaBREAKING NEWS: ನ್ಯಾಯಾಲಯದ ಆವರಣದಲ್ಲಿಯೇ ಪಾಕ್ ಪರ ಘೋಷಣೆ; ವ್ಯಕ್ತಿಯನ್ನು ಹಿಡಿದು ಥಳಿಸಿದ ವಕೀಲರು

BREAKING NEWS: ನ್ಯಾಯಾಲಯದ ಆವರಣದಲ್ಲಿಯೇ ಪಾಕ್ ಪರ ಘೋಷಣೆ; ವ್ಯಕ್ತಿಯನ್ನು ಹಿಡಿದು ಥಳಿಸಿದ ವಕೀಲರು

ಬೆಳಗಾವಿ: ವ್ಯಕ್ತಿಯೋರ್ವ ಕೋರ್ಟ್ ಆವರಣದಲ್ಲಿಯೇ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಜಯೇಶ್ ಪೂಜಾರಿ ಎಂಬಾತ ಬೆಳಗಾವಿ ಕೋರ್ಟ್ ಗೆ ವಿಚಾರಣೆಗೆಂದು ಬಂದಿದ್ದ. ಈತ ಇದ್ದಕ್ಕಿದ್ದಂತೆ ನ್ಯಾಯಾಲಯದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾನೆ. ತಕ್ಷಣ ಕೋರ್ಟ್ ಆವರಣದಲ್ಲಿದ್ದ ವಕೀಲರು ಆತನನ್ನು ಹಿಡಿದು ಥಳಿಸಿದ್ದಾರೆ.

ಆರೋಪಿ ಜಯೇಶ್ ಪೂಜಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಗೆ ಜೀವ ಬೆದರಿಕೆ ಹಾಕಿದ ಪ್ರಕರಣದಲ್ಲಿ ವಿಚಾರಣೆಗೆಂದು ಕೋರ್ಟ್ ಗೆ ಆಗಮಿಸಿದ್ದ. ಈ ವೇಳೆ ನ್ಯಾಯಾಲಯದಲ್ಲಿಯೇ ಪಾಕ್ ಪರ ಘೋಷಣೆ ಕೂಗಿದ್ದಾನೆ. ಸಧ್ಯ ಎಪಿಎಂಸಿ ಠಾಣೆ ಪೊಲೀಸರು ಆರೋಪಿ ಜಯೇಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular