HomeEntertainmentಆರಾಟ ಚಿತ್ರದ ಹತ್ತೂರ ಸುತ್ತ ಹಾಡು ರಿಲೀಸ್

ಆರಾಟ ಚಿತ್ರದ ಹತ್ತೂರ ಸುತ್ತ ಹಾಡು ರಿಲೀಸ್

ತನ್ನ ಟೀಸರ್ ಮತ್ತು ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಪುಷ್ಪರಾಜ್ ರೈ ಮಾಲರಬೀಡು ನಿರ್ದೇಶನದ ‘ಆರಾಟ’ ಚಿತ್ರದ ‘ಹತ್ತೂರ ಸುತ್ತ’ ಎಂಬ ಲವ್ ಸಾಂಗ್  ಇಂದು ಆನಂದ್ ಆಡಿಯೋ ಬಿಡುಗಡೆಯಾಗಿದೆ.  ಶಮೀರ್ ಮುಡಿಪು ಈ ಹಾಡಿಗೆ ಧ್ವನಿಯಾಗುವ ಮೂಲಕ ಸಂಗೀತ ಸಂಯೋಜನೆ ನೀಡಿದ್ದಾರೆ. ಯೋಗೀಶ್ ಎ ಎನ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರದಲ್ಲಿ ರಂಜನ್ ಕಾಸರಗೋಡು ಸೇರಿದಂತೆ ವಿನ್ಯಾ ರಾಯ್, ಅನಿಲ್ ರಾಜ್ ಉಪ್ಪಳ, ಸುನಿಲ್ ನೆಲ್ಲಿಗುಡ್ಡೆ, ರವಿ ರಾಮಕುಂಜ, ಚೇತನ್ ರೈ ಮಣಿ, ಸಂದೀಪ್ ಭಕ್ತ, ಉತ್ಸವ ವಾಮಂಜೂರು, ನಯನಾ ಸಾಲಿಯಾನ್ ತೆರೆ ಹಂಚಿಕೊಂಡಿದ್ದು,  ಪಿ ಎನ್ ಆರ್ ಪ್ರೊಡಕ್ಷನ್ ಸಂಸ್ಥೆ ನಿರ್ಮಾಣ ಮಾಡಿದೆ. ದಾಮೂರ್ ಕನ್ಸೂರ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ, ಶರತ್ ಪೂಜಾರಿ ಮಾಲೆಮಾರ್ ವೇಷಭೂಷಣ, ರವಿ ಸುವರ್ಣ  ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular