alex Certify ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ರಾಜ್ಯದ 9 ಜನರು ಸಾವು; ಹುಬ್ಬಳ್ಳಿಯ ಈ ದಂಪತಿ ಹುಟ್ಟಿದ್ದು ಹಾಗೂ ಸಾವನ್ನಪ್ಪಿದ್ದೂ ಒಂದೇ ದಿನ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ ರಾಜ್ಯದ 9 ಜನರು ಸಾವು; ಹುಬ್ಬಳ್ಳಿಯ ಈ ದಂಪತಿ ಹುಟ್ಟಿದ್ದು ಹಾಗೂ ಸಾವನ್ನಪ್ಪಿದ್ದೂ ಒಂದೇ ದಿನ!

ಹುಬ್ಬಳ್ಳಿ: ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದಾಗ ಉತ್ತರ ಕಾಶಿಯ ಸಹಸ್ರತಾಲ್ ನಲ್ಲಿ ಭಾರಿ ಹಿಮಪಾತದಿಂದ 9 ಜನ ಕನ್ನಡಿಗರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹುಬ್ಬಳ್ಳಿ ಮೂಲದ ದಂಪತಿ ಕೂಡ ಮೃತಪಟಿದ್ದಾರೆ.

ಈಗಾಗಲೇ 9 ಜನರ ಮೃತದೇಹವನ್ನು ದೆಹಲಿಯಿಂದ ಬೆಂಗಳೂರಿಗೆ ಏರ್ ಲಿಫ್ಟ್ ಮಡಲಾಗಿದ್ದು, ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ರಾಜ್ಯದಿಂದ ಒಟ್ಟು 22 ಜನರು ಉತ್ತರಾಖಂಡ್ ಕ್ಕೆ ಚರಣಕ್ಕೆ ತೆರಳಿದ್ದರು. ಅವರದಲ್ಲಿ ಹುಬ್ಬಳ್ಳಿ ಮೂಲದ ದಂಪತಿ ವಿನಾಯಕ ಮಂಗರವಾಡಿ ಹಾಗೂ ಸುಜಾತಾ ಕೂಡ ತೆರಳಿದ್ದರು.

ಬಿವಿಬಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದ ಇವರು ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆಗಾಗ ಚಾರಣಕ್ಕೆ ತೆರಳುತ್ತಿದ್ದರು. ಆದರೆ ಈ ಬಾರಿ ನಡೆದಿದ್ದು ಮಾತ್ರ ದುರಂತ. ಅಚ್ಚರಿ ಎಂದರೆ ಸುಜಾತಾ ಹಾಗೂ ವಿನಾಯಕ ಮಂಗರವಾಡಿ ದಂಪತಿ ಹುಟ್ಟಿದ್ದು ಕೂಡ ಒಂದೇ ದಿನ ಹಾಗೂ ಸಾವನ್ನಪ್ಪಿದ್ದೂ ಕೂಡ ಒಂದೇ ದಿನ. ದಂಪತಿ ಸಾವಿನಲ್ಲಿಯೂ ಜೊತೆಯಾಗಿದ್ದಾರೆ.

ಆದರೆ ತಂದೆ-ತಾಯಿ ಕಳೆದುಕೊಂಡು ಮಕ್ಕಳು ಅನಾಥರಾಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಸಹಸ್ರತಾಲ್ ನಲ್ಲಿ ಚಾರಣಕ್ಕೆ ತೆರಳಿದ್ದ ವೇಳೆ ಹಿಂತಿರುಗುತ್ತಿದ್ದಾಗ ಏಕಾಏಕಿ ಹಿಮಪಾತವಾಗಿ ಮಾರ್ಗವೇ ಕಾಣದಂತಾಗಿದೆ. ಇದರಿಂದ ಹಿಮಪಾತ ಕಡಿಮೆಯಾದಬಳಿಕ ಪರ್ವತದಿಂದ ಕೆಳಗಿಳಿದು ಶಿಬಿರಕ್ಕೆ ತೆರಳಲು ಕಾದು ಕುಳಿತಿದ್ದರು. ಆದರೆ ವಿಪರೀತ ಚಳಿ, ಹಿಮಪಾತದ ತೀವ್ರತೆಗೆ ಒಬ್ಬೊಬ್ಬರಾಗಿ ಕುಸಿದು ಬಿದ್ದು 9 ಜನರು ಸಾವನ್ನಪ್ಪಿದ್ದಾರೆ. 12 ಜನರ ಸ್ಥಿತಿ ಗಂಭೀರವಾಗಿದ್ದು, ಇನ್ನು ಕೆಲವರು ಆರೋಗ್ಯದಿಂದ ಹಿಂರುಗಿದ್ದಾರೆ. 12 ಜನರನ್ನು ಡೆಹ್ರಾಡೂನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...