)
ನಿನ್ನೆ ನಡೆದ ಟಿ20 ವಿಶ್ವಕಪ್ ನ ಹನ್ನೊಂದನೇ ಪಂದ್ಯದಲ್ಲಿ ಯುಎಸ್ಎ ತಂಡ ಪಾಕಿಸ್ತಾನದ ಎದುರು ರೋಚಕ ಜಯ ಸಾಧಿಸಿದೆ ಸಾಧಿಸಿದೆ. ಈ ಪಂದ್ಯದಲ್ಲಿ ಯು ಎಸ್ ಎ ತಂಡದಲ್ಲಿರುವ ಭಾರತೀಯ ಮೂಲದ ಆಟಗಾರರೇ ಪ್ರಮುಖ ಪಾತ್ರ ವಹಿಸಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದ ಯುಎಸ್ಎ ತಂಡ ಪಾಕಿಸ್ತಾನದ ಬಲಿಷ್ಠ ಬ್ಯಾಟ್ಸ್ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರೆ ನಾಯಕ ಬಾಬರ್ ಅಜಾಮ್ 44 ರನ್ ಮತ್ತು ಶದಬ್ ಖಾನ್ 40 ರನ್ ಗಳಿಸುವ ಮೂಲಕ 159 ರನ್ ದಾಖಲಿಸಲು ಸಹಕಾರಿಯದರು. ಯು ಎಸ್ ಎ ತಂಡದಲ್ಲಿರುವ ಕನ್ನಡಿಗ ನೋಸ್ತೂಶ್ ಕೆಂಜಿಗೆ ಮೂರು ವಿಕೆಟ್ ಕಬಳಿಸಿದರೆ ಸೌರಭ್ ನೇತ್ರವಾಲ್ಕರ್ ಎರಡು ವಿಕೆಟ್ ಪಡೆದುಕೊಂಡಿದ್ದಾರೆ.
ಗುರಿ ಬೆನ್ನೆತ್ತಿದ ಯುಎಸ್ಎ ತಂಡದಲ್ಲಿ ಆರಂಭಿಕ ಬ್ಯಾಟ್ಸ್ಮನ್ ನಾಯಕ ಮೊನಾಂಕ್ ಪಟೇಲ್ ಅರ್ಧ ಶತಕ ಸಿಡಿಸುವ ಮೂಲಕ ಎಲ್ಲರ ಗಮನ ಸೆಳೆದರು. ಯುಎಸ್ಎ ತಂಡ ಕೇವಲ ಮೂರು ವಿಕೆಟ್ ಕಳೆದುಕೊಂಡಿದ್ದರು ಕಡಿಮೆ ಎಸೆತಗಳಿದ್ದ ಕಾರಣ ಪಂದ್ಯ ಡ್ರಾ ಹಂತ ತಲುಪಿತು.
ಯುಎಸ್ಎ ತಂಡ ಸೂಪರ್ ಓವರ್ ನಲ್ಲಿ 18 ರನ್ ದಾಖಲಿಸಿದ್ದು, ಪಾಕಿಸ್ತಾನ ತಂಡ ಗುರಿ ತಲುಪುವಲ್ಲಿ ವಿಫಲವಾಗಿದೆ ಐದು ರನ್ ಗಳಿಂದ ಸೋಲನುಭವಿಸಿದೆ. ಈ ಮೂಲಕ ಯು ಎಸ್ ಎ ತಂಡ ಟಿ20 ವಿಶ್ವಕಪ್ ನಲ್ಲಿ ಹೊಸ ಇತಿಹಾಸ ಬರೆದಿದೆ.