ಜೀವನದಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಹಾಗಾಗಿ ಕೆಲವರು ಅದನ್ನು ಮೆಟ್ಟಿ ನಿಂತರೆ ಇನ್ನೂ ಕೆಲವರು ಅದನ್ನು ನಿವಾರಿಸಿಕೊಳ್ಳಲು ದೇವರ ಮೊರೆ ಹೋಗುತ್ತಾರೆ. ಹಾಗಾಗಿ ಅಂತವರು ನಿಮ್ಮ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಸಿಂಧೂರದ ಪರಿಹಾರವನ್ನು ಮಾಡುವ ಮೂಲಕ ಪರಿಹರಿಸಿಕೊಳ್ಳಬಹುದು.
ನಿಮ್ಮ ಕೆಲಸದಲ್ಲಿ ಯಾವುದೇ ಅಡೆತಡೆ ಇದ್ದರೆ ಮತ್ತು ಆ ಕೆಲಸದಲ್ಲಿ ಯಶಸ್ಸು ಗಳಿಸಲು ಹರಿಯುವ ನೀರಿನಲ್ಲಿ ಸಿಂಧೂರವನ್ನು ಅರ್ಪಿಸಿ. ಇದರಿಂದ ಗ್ರಹಗಳ ದೋಷ ಕಡಿಮೆಯಾಗುತ್ತದೆ.
ಹಾಗೇ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ನಿವಾರಿಸಲು ಕೆಲವರು ಹನುಮಂತನ ಮೊರೆ ಹೋಗುತ್ತಾರೆ. ಅಂತವರು ಹನುಮಂತನಿಗೆ ಮಲ್ಲಿಗೆ ಎಣ್ಣೆಯ ಜೊತೆಗೆ ಸಿಂಧೂರವನ್ನು ಅರ್ಪಿಸಿ. ಇದರಿಂದ ಹನುಮಂತನ ಅನುಗ್ರಹ ದೊರೆಯುತ್ತದೆ.
ಮನೆಯಲ್ಲಿ ಸದಾಕಾಲ ಜಗಳ, ಗಲಾಟೆ ನಡೆಯುತ್ತಿದ್ದರೆ ಸಿಂಧೂರಕ್ಕೆ ಸ್ವಲ್ಪ ಎಣ್ಣೆಯನ್ನು ಬೆರೆಸಿ ಮನೆಯ ಮುಖ್ಯ ದ್ವಾರದಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬಿಡಿಸಿ. ಇದನ್ನು ನಲವತ್ತು ದಿನಗಳ ಕಾಲ ಮಾಡಿದರೆ ಮನೆಯಲ್ಲಿರುವ ನಕರಾತ್ಮಕತೆ ಹೊರಹೋಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ.
ಹಾಗೇ ಪತಿ ಪತ್ನಿಯರ ನಡುವಿನ ಸಂಬಂಧ ಗಟ್ಟಿಯಾಗಿರಲು ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಸಿಂಧೂರವನ್ನು ಬಟ್ಟೆಯಲ್ಲಿ ಕಟ್ಟಿ ಇಡಿ. ಬೆಳಿಗ್ಗೆ ಅದನ್ನು ಹೊರಗೆ ಎಸೆದು ಮನೆಯಲ್ಲಿ ಕರ್ಪೂರವನ್ನು ಹಚ್ಚಿ.
ಇಂತಹ ಸಿಂಧೂರದ ಪರಿಹಾರವನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಜೀವನದ ಸಂಕಷ್ಟಗಳ್ನು ಪರಿಹರಿಸಿಕೊಳ್ಳಿ ಮತ್ತು ದೇವರ ಅನುಗ್ರಹ ಪಡೆಯಿರಿ.