ಹೈದರಾಬಾದ್ : ತನ್ನ ವಿಭಿನ್ನ ಪ್ರಚಾರದ ಮೂಲಕ ಗಮನ ಸೆಳೆದಿದ್ದ ಬಿಜೆಪಿಯ ಕೊಂಪೆಲಾ ಮಾಧವಿ ಲತಾ, ಎಐಎಂಐಎಂ ಅಭ್ಯರ್ಥಿ ಅಸಾದುದ್ದೀನ್ ಓವೈಸಿ ವಿರುದ್ದ ಭಾರೀ ಹಿನ್ನಡೆ ಅನುಭವಿಸಿದ್ದಾರೆ.
ಮೂಲಗಳ ಪ್ರಕಾರ ಅಸಾದುದ್ದೀನ್ ಓವೈಸಿಯವರು ಮಾಧವಿ ಲತಾ ವಿರುದ್ದ 3,17,298 ಮತಗಳ ಭಾರೀ ಅಂತರದಿಂದ ಲೀಡ್ ನಲ್ಲಿದ್ದಾರೆ. ಒವೈಸಿಗೆ ಇದುವರೆಗೆ 6,29,989 ಮತ ಪಡೆದಿದ್ದಾರೆ. ಈ ಮೂಲಕ ಗೆಲ್ಲುವ ಲೆಕ್ಕಾಚಾರ ಹಾಕಿದ್ದ ಮಾಧವಿ ಲತಾಗೆ ಭಾರಿ ಹಿನ್ನಡೆಯಾಗಿದೆ. 2019ರ ಚುನಾವಣೆಯಲ್ಲಿ ಅಸಾದುದ್ದೀನ್ ಓವೈಸಿ, ಬಿಜೆಪಿಯ ಡಾ.ಭಗವಂತ್ ರಾವ್ ವಿರುದ್ದ 2,82,187 ಮತದಿಂದ ಗೆಲುವು ದಾಖಲಿಸಿದ್ದರು.
ಬಿಜೆಪಿಯ ಮಾಧವಿ ಲತಾಗೆ 3,12,691, ಕಾಂಗ್ರೆಸ್ಸಿನ ಮೊಹಮ್ಮದ ವಾಲಿವುಲ್ಲಾ ಸಮೀರ್ 58,787 ಮತ್ತು ಬಿಆರ್ಎಸ್ ಅಭ್ಯರ್ಥಿ ಶ್ರೀನಿವಾಸ ಯಾದವ್ ಗದ್ದಂ ಕೇವಲ 17,593 ಮತಗಳನ್ನು ಪಡೆದಿದ್ದಾರೆ.
#WATCH | Patna, Bihar: AIMIM chief Asaduddin Owaisi says, "… We hope that PM Narendra Modi does not become the Prime Minister for the 3rd time…"
On Union Home Minister Amit Shah's statement on Muslim reservation, he says, "He (Amit Shah) will end the reservation for… pic.twitter.com/QvknGpVGi0
— ANI (@ANI) May 25, 2024

