HomeBusinessಚುನಾವಣಾ ಫಲಿತಾಂಶದ ನಡುವೆಯೇ HDFC ಬ್ಯಾಂಕ್ ಗ್ರಾಹಕರಿಗೆ ಬಿಗ್‌ ನ್ಯೂಸ್‌; 2 ದಿನ ಇರುವುದಿಲ್ಲ ಈ...

ಚುನಾವಣಾ ಫಲಿತಾಂಶದ ನಡುವೆಯೇ HDFC ಬ್ಯಾಂಕ್ ಗ್ರಾಹಕರಿಗೆ ಬಿಗ್‌ ನ್ಯೂಸ್‌; 2 ದಿನ ಇರುವುದಿಲ್ಲ ಈ ಸೇವೆ…!

ಲೋಕಸಭಾ ಚುನಾವಣೆಯ ಫಲಿತಾಂಶದ ನಡುವೆಯೇ HDFC ಬ್ಯಾಂಕ್‌ ಗ್ರಾಹಕರಿಗೆ ಮಹತ್ವದ ಮಾಹಿತಿಯೊಂದಿದೆ. ಬ್ಯಾಂಕ್‌  ಬಹುದೊಡ್ಡ ಅಪ್‌ಡೇಟ್‌ ಒಂದನ್ನು ಮಾಡಲು ಮುಂದಾಗಿದೆ. ಈ ಸಂದರ್ಭದಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಲ್ಲಾ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ವಿಂಡೋಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುವುದಿಲ್ಲ. ಬ್ಯಾಂಕ್ ತನ್ನ ಕೋಟ್ಯಾಂತರ ಗ್ರಾಹಕರಿಗೆ ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಮಾಹಿತಿ ನೀಡಿದೆ.

HDFC ಬ್ಯಾಂಕ್ ಕಳುಹಿಸಿರುವ ಇಮೇಲ್‌ನಲ್ಲಿ ಬ್ಯಾಂಕ್‌ನ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್‌ಗಳು ಜೂನ್ 4 ರಂದು ಮಧ್ಯಾಹ್ನ 12:30 ರಿಂದ 2:30 ರವರೆಗೆ ಮತ್ತು ಜೂನ್‌ 6ರಂದು ಮಧ್ಯಾಹ್ನ 12:30 ರಿಂದ 2:30 ರವರೆಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಲಾಗಿದೆ. ಮೇಲೆ ತಿಳಿಸಲಾದ ದಿನಾಂಕ ಮತ್ತು ಸಮಯದಲ್ಲಿ ಡೆಬಿಟ್, ಕ್ರೆಡಿಟ್ ಮತ್ತು ಪ್ರಿಪೇಯ್ಡ್ ಕಾರ್ಡ್ ಸೇವೆಗಳಿಗೆ ಸಿಸ್ಟಮ್ ಅಪ್‌ಗ್ರೇಡ್ ಮಾಡಲು ಬ್ಯಾಂಕ್ ಯೋಜಿಸಿದೆ.

ಹಾಗಾಗಿ ಎಲ್ಲಾ ಡೆಬಿಟ್, ಕ್ರೆಡಿಟ್, ಪ್ರಿಪೇಯ್ಡ್ ಕಾರ್ಡ್ ಸೇವೆಗಳು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ, ಪಿಒಎಸ್, ಆನ್‌ಲೈನ್ ಮತ್ತು ನೆಟ್‌ಸೇಫ್ ವಹಿವಾಟುಗಳು ನವೀಕರಣದ ಸಮಯದಲ್ಲಿ  ಲಭ್ಯವಿರುವುದಿಲ್ಲ. ಈ ಅವಧಿಯಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನ ರುಪೇ ಕಾರ್ಡ್ ಇತರ ಪಾವತಿ ಗೇಟ್‌ವೇಗಳಲ್ಲಿ ಆನ್‌ಲೈನ್ ವಹಿವಾಟುಗಳಿಗೆ ಕಾರ್ಯನಿರ್ವಹಿಸುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತೊಂದು ದೊಡ್ಡ ಬದಲಾವಣೆಯನ್ನು ಮಾಡಿದೆ. ಇದರ ಅಡಿಯಲ್ಲಿ ಈಗ ಗ್ರಾಹಕರು 100 ರೂಪಾಯಿ ಪಾವತಿಸಿ ಮತ್ತು 500 ರೂಪಾಯಿಗಿಂತ ಹೆಚ್ಚು ರಿಸೀವ್‌ ಮಾಡಿದ  ನಂತರ ಮಾತ್ರ SMS ಮೂಲಕ ನವೀಕರಣಗಳನ್ನು ಪಡೆಯುತ್ತಾರೆ.

For Latest News Updates, Join Our Whatsapp Community🚩
RELATED ARTICLES

Most Popular