ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ಬಹುನಿರೀಕ್ಷಿತ ‘ಮಾದೇವ’ ಚಿತ್ರದ ಮೊದಲ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ
. ”ಎದೇಲಿ ತಂಗಾಳಿ” ಎಂಬ ಈ ಮೆಲೋಡಿ ಹಾಡಿಗೆ ಅನನ್ಯ ಭಟ್ ಧ್ವನಿಯಾಗಿದ್ದು, ಪ್ರದ್ದ್ಯೋತ್ತನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಪ್ರಸನ್ನ ಕುಮಾರ್ ಅವರ ಸಾಹಿತ್ಯವಿದೆ.
ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಮತ್ತು ಸೋನಲ್ ಮೊಂಟೇರೊ ಪ್ರಮುಕ ಪಾತ್ರದಲ್ಲಿದ್ದು ಹಿರಿಯ ನಟಿ ಮಾಲಾಶ್ರೀ ಸೇರಿದಂತೆ ಶ್ರೀನಗರ ಕಿಟ್ಟಿ ಶೃತಿ ಅಚ್ಯುತ್ ಕುಮಾರ್, ಕಾಕ್ರೋಚ್ ಸುಧೀರ್, ಮೈಕ್ರೋ ನಾಗರಾಜ್, ಬಾಲರಾಜ್ವಾಡಿ, ಚೈತ್ರ ಮತ್ತು ಮುನಿರಾಜು ತೆರೆ ಹಂಚಿಕೊಂಡಿದ್ದಾರೆ. ರಾಧಾಕೃಷ್ಣ ಪಿಕ್ಚರ್ಸ್ ಬ್ಯಾನರ್ ನಲ್ಲಿ ಆರ್ ಕೇಶವ (ದೇವಸಂದ್ರ ) ನಿರ್ಮಾಣ ಮಾಡಿದ್ದಾರೆ. ವಿಜಯ್ ಎಂ ಕುಮಾರ್ ಸಂಕಲನ, ಬಾಲಕೃಷ್ಣ ತೋಟ ಛಾಯಾಗ್ರಹಣವಿದೆ.