VIDEO: ಪಡ್ಡೆ ಹುಡುಗರ ಬೈಕ್ ಸ್ಟಂಟ್; ಬೆನ್ನಟ್ಟಿ ಹೆಡೆಮುರಿ ಕಟ್ಟಿದ ಪೊಲೀಸರು…!

ವಾರಾಂತ್ಯದ ದಿನಗಳಂದು ರಸ್ತೆಗಳಲ್ಲಿ ಪಡ್ಡೆ ಹುಡುಗರು ಬೈಕ್ ಸ್ಟಂಟ್ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಇತರೆ ಸವಾರರಿಗೆ ಅನಾನುಕೂಲವಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಅಪಾಯಕಾರಿ ಸ್ಟಂಟ್ ಮಾಡಲು ಮುಂದಾಗುತ್ತಾರೆ. ಈ ಮೂಲಕ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವುದಲ್ಲದೆ ಬೇರೆಯವರಿಗೂ ಮಾರಕವಾಗಿ ಪರಿಣಮಿಸುತ್ತಾರೆ.

ಇದೀಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂತಹ ಘಟನೆ ನಡೆದಿದ್ದು, ಏಳೆಂಟು ಬೈಕುಗಳಲ್ಲಿ ಬಂದಿದ್ದ ಯುವಕರ ಗುಂಪು ಅಲ್ಲಿನ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದೆ. ಆ ಸಂದರ್ಭದಲ್ಲಿ ನೈಟ್ ಪ್ಯಾಟ್ರೋಲಿಂಗ್ ತಂಡದ ಪೊಲೀಸರು ಅವರುಗಳ ಬೆನ್ನಟ್ಟಿ ಹೆಡೆಮುರಿ ಕಟ್ಟಿದ್ದಾರೆ. ಅಲ್ಲದೆ ಈ ಸಂಬಂಧ ಏಳು ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

https://twitter.com/ANI/status/1797176256494018675?ref_src=twsrc%5Etfw%7Ctwcamp%5Etweetembed%7Ctwterm%5E1797176256494018675%7Ctwgr%5Eb8280c8ca07a8c7883d357

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read