alex Certify ಮೇಲ್ಮನೆ ಚುನಾವಣೆ ಮತದಾರರಿಗೆ ಮತದಾನ ಮಾಡುವ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಲ್ಮನೆ ಚುನಾವಣೆ ಮತದಾರರಿಗೆ ಮತದಾನ ಮಾಡುವ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ವಿಧಾನ ಪರಿಷತ್ತಿನ ಮೂರು ಪದವೀಧರ ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ.

ಈಶಾನ್ಯ ಪದವೀಧರ, ಬೆಂಗಳೂರು ಪದವೀಧರ, ನೈರುತ್ಯ ಪದವೀಧರ, ಆಗ್ನೇಯ ಶಿಕ್ಷಕರ, ನೈರುತ್ಯ ಶಿಕ್ಷಕರ, ದಕ್ಷಿಣ ಶಿಕ್ಷಕರ ಕ್ಷೇತ್ರಗಳಿಗೆ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ

ಚುನಾವಣೆಯಲ್ಲಿ ಪ್ರಾಶಸ್ತ್ಯದ ಮತದಾನ ಮಾಡುವಾಗ ಭಾರತ ಚುನಾವಣಾ ಆಯೋಗದ ಚಿಹ್ನೆ ಹೊಂದಿರುವ Voilet ಬಣ್ಣದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಬೇಕು

ಮತದಾನಕ್ಕಾಗಿ, ಮತಗಟ್ಟೆ ಅಧಿಕಾರಿ ನಿಮಗೆ ಒದಗಿಸಿದ ಸ್ಕೆಚ್ ಪೆನ್ನನ್ನು ಮಾತ್ರ ಬಳಸಿ. ಬೇರೆ ಯಾವುದೇ ಬಣ್ಣದ ಲೇಖನಿ ಬಳಸಬೇಡಿ.

ನಿಮ್ಮ ಮೊದಲ ಪ್ರಾಶಸ್ತ್ಯವಾಗಿ ನೀವು ಆಯ್ಕೆ ಮಾಡಿದ ಅಭ್ಯರ್ಥಿಯ ಹೆಸರಿನ ಎದುರು ಒದಗಿಸಲಾದ “ಪ್ರಾಶಸ್ತ್ಯ ಕ್ರಮ” ಎಂದು ಗುರುತಿಸಲಾದ ಅಂಕಣದಲ್ಲಿ “1” ಅಂಕಿ ನಮೂದಿಸುವ ಮೂಲಕ ಮತ ಚಲಾಯಿಸಿ. ಈ ಅಂಕಿ ‘1″ ಅನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಎದುರು ಮಾತ್ರ ಬರೆಯಬೇಕು.

ಒಟ್ಟು ಅಭ್ಯರ್ಥಿಗಳ ಸಂಖ್ಯೆಯನ್ನು ಪ್ರಾಶಸ್ತ್ಯದ ಮತವನ್ನು ಚಲಾಯಿಸುವುದು.

ನಿಮ್ಮ ಪ್ರಾಶಸ್ತ್ಯ ಕ್ರಮದಲ್ಲಿ ಅಂತಹ ಅಭ್ಯರ್ಥಿಗಳ ಹೆಸರುಗಳ ಎದುರು “ಪ್ರಾಶಸ್ತ್ಯದ ಕ್ರಮ” ಎಂದು ಗುರುತಿಸಲಾದ ಕಾಲಂನಲ್ಲಿ, ನಂತರದ ಅಂಕಿಗಳು ಅಂದರೆ 2,3,4 ಇತ್ಯಾದಿಗಳನ್ನು ನಮೂದಿಸುವ ಮೂಲಕ ಉಳಿದ ಅಭ್ಯರ್ಥಿಗಳಿಗೆ ನಿಮ್ಮ ಪ್ರಾಶಸ್ತ್ಯಗಳನ್ನು ಮತ ಚಲಾಯಿಸಬಹುದು.

ನೀವು ಯಾವುದೇ ಅಭ್ಯರ್ಥಿಯ ಹೆಸರಿನ ಎದುರು ಕೇವಲ ಒಂದು ಅಂಕಿ ಹಾಕಿರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ಒಂದೇ ಅಂಕಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಎದುರು ಹಾಕಿಲ್ಲ ಎಂದು ಖಚಿತಪಡಿಸಿಕೊಳ್ಳಿ.

ಪ್ರಾಶಸ್ತ್ಯವನ್ನು ಅಂಕಿಗಳಲ್ಲಿ ಮಾತ್ರ ಸೂಚಿಸಬೇಕು, ಅಂದರೆ 1, 2, 3 ಇತ್ಯಾದಿ. ಭಾರತೀಯ ಅಂಕಿಗಳ ಅಂತರರಾಷ್ಟ್ರೀಯ ರೂಪದಲ್ಲಿ, ರೋಮನ್ (1, 11, 111, IV) ರೂಪದಲ್ಲಿ ಅಥವಾ ಕನ್ನಡದಲ್ಲಿ (೧, ೨, ೩, ೪) ಗುರುತಿಸಬಹುದು.

ನಿಮ್ಮ ಹೆಸರು ಅಥವಾ ಯಾವುದೇ ಪದಗಳನ್ನು ಬರೆಯಬೇಡಿ ಮತ್ತು ಮತಪತ್ರದಲ್ಲಿ ನಿಮ್ಮ ಸಹಿ ಅಥವಾ ಕಿರುಸಹಿ, ಉಪನಾಮ ಇತ್ಯಾದಿಗಳನ್ನು ಹಾಕಬೇಡಿ. ಅಲ್ಲದೆ, ನಿಮ್ಮ ಹೆಬ್ಬೆರಳಿನ ಗುರುತನ್ನು ಹಾಕಬೇಡಿ. ಇವುಗಳು ನಿಮ್ಮ ಮತಪತ್ರವನ್ನು ಅಸಿಂಧುಗೊಳಿಸುತ್ತವೆ.

ನಿಮ್ಮ ಪ್ರಾಶಸ್ತ್ಯವನ್ನು ಸೂಚಿಸಲು ನಿಮ್ಮ ಆಯ್ಕೆಯ ಅಭ್ಯರ್ಥಿಗಳ ಎದುರು ಯಾವುದೇ ಗುರುತನ್ನು ಅಥವಾ ‘X’ ಅಥವಾ ಟಿಕ್ ‘V’ ಗುರುತನ್ನು ಹಾಕಬೇಡಿ.

ನಿಮ್ಮ ಮತಪತ್ರವನ್ನು ಮಾನ್ಯ ಮಾಡಲು, ಯಾವುದಾದರೂ ಒಂದು ಅಭ್ಯರ್ಥಿಯ ಎದುರು ಅಂಕಿ 1 ಅನ್ನು ನಮೂದಿಸುವ ಮೂಲಕ ನಿಮ್ಮ ಮೊದಲ ಪ್ರಾಶಸ್ತ್ಯವನ್ನು ಸೂಚಿಸುವುದು ಅವಶ್ಯಕ. ಇತರ ಪ್ರಾಶಸ್ತ್ಯಗಳು ಐಚ್ಛಿಕವಾಗಿರುತ್ತವೆ.

ಗಮನಿಸಿ: ಈ ಕಾರಣಗಳಿಗೆ ಮತಪತ್ರ ಅಸಿಂಧುವಾಗುತ್ತದೆ.

ಯಾವುದೇ ಅಭ್ಯರ್ಥಿಯ ಎದುರು 1ನೇ ಪ್ರಾಶಸ್ತ್ಯವನ್ನು ನಿಯಮಾನುಸಾರ ಗುರುತಿಸದಿರುವುದು.

ಒಂದಕ್ಕಿಂತ ಹೆಚ್ಚಿನ ಅಭ್ಯರ್ಥಿಯ ಎದುರು 1ನೇ ಪ್ರಾಶಸ್ತ್ಯವನ್ನು ಗುರುತಿಸಿರುವುದು.

1ನೇ ಪ್ರಾಶಸ್ತ್ಯವನ್ನು ನಿಗದಿತ ಅಂಕಣದಲ್ಲಿ ಗುರುತಿಸದೆ ಇರುವುದರಿಂದ 1ನೇ ಪ್ರಾಶಸ್ತ್ಯವನ್ನು ಯಾವ ಅಭ್ಯರ್ಥಿಗೆ ನೀಡಲು ಉದ್ದೇಶಿಸಲಾಗಿದೆ ಎಂಬುದನ್ನು ನಿಖರವಾಗಿ ಗುರುತಿಸುವುದು ಅಸಾಧ್ಯವಾಗಿರುವುದು.

ಅಂಕಿ 1 ಮತ್ತು 2. 3 ಇತ್ಯಾದಿ ಇತರ ಕೆಲವು ಅಂಕಿಗಳನ್ನು ಸಹ ಒಂದೇ ಅಭ್ಯರ್ಥಿಯ ಹೆಸರಿನ ಎದುರು ಗುರುತಿಸಿರುವುದು.

ಪ್ರಾಶಸ್ತ್ಯವನ್ನು ಅಂಕಿಗಳ ಬದಲಿಗೆ ಪದಗಳಲ್ಲಿ ಚಲಾಯಿಸಿದಲ್ಲಿ(ಒಂದು, ಎರಡು/ One, Two)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...