ಆಲೂಗಡ್ಡೆ ಬಹಳ ರುಚಿಕರವಾದ ತರಕಾರಿ. ಹಾಗಾಗಿ ಅದರಿಂದ ಹಲವು ಬಗೆಯ ಅಡುಗೆಗಳನ್ನು ತಯಾರಿಸುತ್ತಾರೆ. ಆಲೂಗಡ್ಡೆಯನ್ನು ಬೇಯಿಸಲು ಕುಕ್ಕರ್ ಅನ್ನು ಬಳಸುತ್ತಾರೆ. ಇದರಿಂದ ನಿಮ್ಮ ಕೆಲಸ ಸುಲಭವಾಗುತ್ತದೆ. ಆದರೆ ಆಲೂಗಡ್ಡೆಯನ್ನು ಬೇಯಿಸುವುದರಿಂದ ಕುಕ್ಕರ್ ಕಪ್ಪಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ತಡೆಯಲು ಈ ಸಲಹೆ ಪಾಲಿಸಿ.
ಆಲೂಗಡ್ಡೆಯನ್ನು ಕುಕ್ಕರ್ ನಲ್ಲಿ ಬೇಯಿಸುವಾಗ ಅದಕ್ಕೆ ಸ್ವಲ್ಪ ಉಪ್ಪು ಮತ್ತು ನಿಂಬೆ ತುಂಡುಗಳನ್ನು ಹಾಕಿ. ನಂತರ ಮುಚ್ಚಳ ಮುಚ್ಚಿ ಬೇಯಿಸಿ. ಇದರಿಂದ ಕುಕ್ಕರ್ ಬಣ್ಣ ಕಪ್ಪಾಗುವುದಿಲ್ಲ ಮತ್ತು ಆಲೂಗಡ್ಡೆಯ ಸಿಪ್ಪೆಯನ್ನು ಸುಲಭವಾಗಿ ತೆಗೆಯಬಹುದು.
ಅಲ್ಲದೇ ಆಲೂಗಡ್ಡೆಯನ್ನು ಕತ್ತರಿಸಿಟ್ಟಾಗ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಲ್ಲಿ ಪಿಷ್ಟದ ಅಂಶ ಹೆಚ್ಚಾಗಿರುವ ಕಾರಣ ಅದು ಗಾಳಿಗೆ ಒಡ್ಡಿಕೊಂಡಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದನ್ನು ತಪ್ಪಿಸಲು ಆಲೂಗಡ್ಡೆಯನ್ನು ಕತ್ತರಿಸಿದ ನಂತರ ನೀರಿನಲ್ಲಿ ಮುಳುಗಿಸಿಡಿ. ಅಥವಾ ಆಲೂಗಡ್ಡೆಯ ಕತ್ತರಿಸಿದ ಭಾಗಕ್ಕೆ ಉಪ್ಪು ಅಥವಾ ನಿಂಬೆಯ ರಸವನ್ನು ಹಚ್ಚಿ.
ಅಲ್ಲದೇ ಕಪ್ಪು ಬಣ್ಣಕ್ಕೆ ತಿರುಗಿದ ಆಲೂಗಡ್ಡೆಯನ್ನು ಎಸೆಯುವ ಅಗತ್ಯವಿಲ್ಲ. ಯಾಕೆಂದರೆ ಅದರ ಬಣ್ಣ ಕಪ್ಪಾದ ಮಾತ್ರಕ್ಕೆ ಅದರ ಪೌಷ್ಟಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾಗಿ ಅದರಿಂದ ತಯಾರಿಸಿದ ಅಡುಗೆ ರುಚಿಕರವಾಗಿ ಇರುತ್ತದೆ.