BREAKING: ಅಸ್ಸಾಂಗೆ ಮೋದಿ ವಿಶೇಷ ಗಿಫ್ಟ್: ಗುವಾಹಟಿಯಲ್ಲಿ ಐಐಎಂ ಸ್ಥಾಪನೆಗೆ ಅನುಮೋದನೆ

ನವದೆಹಲಿ: ಗುವಾಹಟಿ ಬಳಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ಸ್ಥಾಪನೆಗೆ ಪ್ರಧಾನಿ ಮೋದಿ ಅನುಮೋದನೆ ನೀಡಿದ್ದಾರೆ.

ಅಸ್ಸಾಂನ ಗುವಾಹಟಿ ಬಳಿ ಹೊಸ IIM ಸ್ಥಾಪಿಸಲು ‘ಪ್ರಧಾನಿ ಮೋದಿ ವಿಶೇಷ ಉಡುಗೊರೆ ನೀಡಿದ್ದಾರೆ’ ಎಂದು ಸಿಎಂ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಅಸ್ಸಾಂನ ರಾಜಧಾನಿ ಗುವಾಹಟಿ ಬಳಿ ಹೊಸ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ) ಸ್ಥಾಪನೆಯ ಪ್ರಸ್ತಾವನೆಯನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸೂಚಿಸಿದಂತೆ ಕೇಂದ್ರ ಶಿಕ್ಷಣ ಸಚಿವಾಲಯ ಅನುಮೋದಿಸಿದೆ. ಹೊಸ ಐಐಎಂ ಅಸ್ಸಾಂನ ಕಮ್ರೂಪ್ ಜಿಲ್ಲೆಯ ಮರಭಿತದಲ್ಲಿ ಸ್ಥಾಪನೆಯಾಗಲಿದೆ.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಭಾನುವಾರ ಮಾಹಿತಿ ನೀಡಿದ್ದು, ನಮ್ಮ ವಿನಂತಿಯ ಮೇರೆಗೆ ಪ್ರಧಾನಿ ಮೋದಿ ಅವರು ಗುವಾಹಟಿ ಬಳಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಥಾಪನೆಗೆ ಅನುಮೋದಿಸುವ ಮೂಲಕ ಅಸ್ಸಾಂನ ಜನರಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.

https://twitter.com/himantabiswa/status/1797152607884247240

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read