alex Certify ಗರ್ಲ್ ಫ್ರೆಂಡ್ ಹುಡುಕಿಕೊಡಿ ಎಂದು ಯುವಕನ ಮೊರೆ; ಫನ್ನಿ ಉತ್ತರ ನೀಡಿದ ಪೊಲೀಸರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಲ್ ಫ್ರೆಂಡ್ ಹುಡುಕಿಕೊಡಿ ಎಂದು ಯುವಕನ ಮೊರೆ; ಫನ್ನಿ ಉತ್ತರ ನೀಡಿದ ಪೊಲೀಸರು…!

Man seeks Delhi Police's help in finding girlfriend, their hilarious reply wins internet – India TV

ಸಾಮಾಜಿಕ ಮಾಧ್ಯಮದಲ್ಲಿ ಯುವಕನೊಬ್ಬನ ಮನವಿಗೆ ದೆಹಲಿ ಪೊಲೀಸರ ಹಾಸ್ಯಮಯ ಉತ್ತರ ಭಾರೀ ಗಮನ ಸೆಳೆದಿದ್ದು ನೆಟ್ಟಿಗರ ಮೆಚ್ಚುಗೆ ಗಳಿಸಿದೆ.

ಶಿವಂ ಭಾರದ್ವಾಜ್ ಎಂದು ಗುರುತಿಸಲಾದ ಟ್ವಿಟರ್ ಬಳಕೆದಾರ ತನ್ನ ಖಾತೆಯಲ್ಲಿ, “ಯಾವಾಗ ನೀವು ನನಗೆ ಗರ್ಲ್ ಫ್ರೆಂಡ್ ಹುಡುಕಿ ಕೊಡ್ತೀರಾ? ನಾನಿನ್ನೂ ಸಿಗ್ನಲ್ ನಲ್ಲಿ ಇದ್ದೇನೆ, ದೆಹಲಿ ಪೊಲೀಸರೇ ಇದು ನ್ಯಾಯೋಚಿತವಲ್ಲ, ನನಗೆ ಗರ್ಲ್ ಫ್ರೆಂಡ್ ಹುಡುಕಲು ನೀವು ಸಹಾಯ ಮಾಡಬೇಕು.” ಎಂದು ತನ್ನ ಗೆಳತಿಯ ಅನ್ವೇಷಣೆಗೆ ದೆಹಲಿ ಪೊಲೀಸರಿಂದ ಸಹಾಯ ಕೋರಿದ್ದಾನೆ.

ಇದಕ್ಕೆ ಹಾಸ್ಯಮಯವಾಗಿ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, “ಸರ್ ನಿಮ್ಮ ಗರ್ಲ್ ಫ್ರೆಂಡ್ ಹುಡುಕಲು ನಾವು ನಿಮಗೆ ಸಹಾಯ ಮಾಡಬಹುದು (ಅವಳು ಎಂದಾದರೂ ನಾಪತ್ತೆಯಾಗಿದ್ದರೆ ಮಾತ್ರ). ಸಲಹೆ: ನೀವು ‘ಸಿಗ್ನಲ್’ ಆಗಿದ್ದರೆ ನೀವು ಹಸಿರು ಬಣ್ಣದಲ್ಲಿರಿ, ಕೆಂಪು ಬಣ್ಣದಲ್ಲಲ್ಲ.” ಎಂದಿದ್ದಾರೆ.

ಪೊಲೀಸರ ಹಾಸ್ಯದ ಉತ್ತರವು ತ್ವರಿತವಾಗಿ ವೈರಲ್ ಆಗಿದ್ದು ಭಾರೀ ವೀಕ್ಷಣೆಗಳನ್ನು ಸಂಗ್ರಹಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ದೆಹಲಿ ಪೊಲೀಸರ ಪ್ರತಿಕ್ರಿಯೆಯನ್ನು ಮೆಚ್ಚಿಕೊಂಡಿದ್ದು ನಗೆ ಬೀರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...