ಇಸ್ಲಾ ಉದ್ದಿನ್ ನಿರ್ದೇಶನದ ‘ಅನ್ನ’ ಚಿತ್ರದ ‘ಆಸೆಯೆಂಬ ಕುದುರೆ ಏರಿ’ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಬಾಲ್ಯದ ಆಟಗಳನ್ನು ನೆನಪಿಸುವಂತೆ ಮಾಡಿದೆ. ನಾಗೇಶ್ ಕಂಡೆಗಾಲ ಈ ಹಾಡಿಗೆ ಧ್ವನಿಯಾಗುವ ಮೂಲಕ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಿರ್ದೇಶಕ ಇಸ್ಲಾ ಉದ್ದಿನ್ ಸಾಹಿತ್ಯ ಬರೆದಿದ್ದಾರೆ. ನಟ ಸತೀಶ್ ನೀನಾಸಂ ಈ ಹಾಡನ್ನು ಲಾಂಚ್ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಚಿತ್ರವನ್ನು ಗಗನ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ಬಸವರಾಜು ನಿರ್ಮಾಣ ಮಾಡಿದ್ದು, ನಂದನ್ ಜಿಎಂ ಸೇರಿದಂತೆ ಪದ್ಮಶ್ರೀ, ಡಾಕ್ಟರ್ ಭುವನ ಮೈಸೂರ್, ಸಂಪತ್ ಮೈತ್ರಿಯ, ಮತ್ತು ಬಾಲರಾಜ್ವಾಡಿ ಬಣ್ಣ ಹಚ್ಚಿದ್ದಾರೆ. ಗುರುಸ್ವಾಮಿ ಸಂಕಲನ, b.n ಸಿದ್ದು ಪ್ರಸನ್ನ ಅವರ ಸಂಭಾಷಣೆ, ಮಧು ಛಾಯಾಗ್ರಹಣವಿದೆ.