ಕಲಬುರಗಿ: ಕಲಬುರಗಿ ಕಡಗಂಚಿಯ ಕೇಂದ್ರೀಯ ವಿವಿಯ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ.
ಸಂಶೋಧನಾ ವಿದ್ಯಾರ್ಥಿನಿ ಏಪ್ರಿಲ್ 20ರಂದು ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ರಾಷ್ಟ್ರಪತಿಗೆ ಕೇಂದ್ರೀಯ ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿಜಯಕುಮಾರ್ ವಿರುದ್ಧ ಪತ್ರ ಬರೆದಿದ್ದಾರೆ. ದೂರಿನ ಬಗ್ಗೆ ಸಮಗ್ರ ವರದಿ ಸಲ್ಲಿಸಲು ಮಹಿಳಾ ಆಯೋಗದಿಂದ ವಿವಿ ಕುಲ ಸಚಿವರಿಗೆ ಪತ್ರ ಬರೆಯಲಾಗಿದೆ.
ವಿವಿ ರಜಾ ದಿನಗಳು ಹಾಗೂ ಭಾನುವಾರದಂದು ವಿಭಾಗಕ್ಕೆ ಬರಲು ಪ್ರೊ. ವಿಜಯಕುಮಾರ್ ಕರೆಯುತ್ತಿದ್ದರು. ಸಂಜೆ 6.30ಕ್ಕೆ ಸಂಶೋಧನೆ ಬಗ್ಗೆ ಚರ್ಚಿಸುವುದಿದೆ ಬಾ ಎನ್ನುತ್ತಿದ್ದರು. ಹೋಗದಿದ್ದಾಗ ಶಿಷ್ಯವೇತನ ಅರ್ಜಿಗೆ ಸಹಿ ಮಾಡದೆ ಸತಾಯಿಸುತ್ತಿದ್ದರು ಎನ್ನಲಾಗಿದೆ.