HomeEntertainmentಇಂದು ಬಿಡುಗಡೆಯಾಗಲಿದೆ 'ಕಂಡೋರ್ ಮನೆ ಕಥೆ' ಚಿತ್ರದ ಟ್ರೈಲರ್

ಇಂದು ಬಿಡುಗಡೆಯಾಗಲಿದೆ ‘ಕಂಡೋರ್ ಮನೆ ಕಥೆ’ ಚಿತ್ರದ ಟ್ರೈಲರ್

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಕಂಡೋರ್ ಮನೆ ಕಥೆ’ ಚಿತ್ರದ ಟ್ರೈಲರ್ ಇಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.

ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಈ ಸಿನಿಮಾ ಈಗಾಗಲೇ ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದೆ.

ಪ್ರಣವ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ಸೂರಜ್ ಸೇರಿದಂತೆ ಅಪೂರ್ವ ಶ್ರೀ, ರಕ್ಷಿತಾ ಕೆರೆಮನೆ, ರಮಿತ್ ಏಲಕ್ಕಿ, ಧೀರವ್ ಶ್ರೀವತ್ಸ, ಡಿಂಗ್ರಿ ನಾಗರಾಜ್ ಮತ್ತು ರಾಜು ಸೂರ್ಯ ತೆರೆ ಹಂಚಿಕೊಂಡಿದ್ದಾರೆ. ಜಾನ್ ಕೆನಡಿ ಸಂಗೀತ ಸಂಯೋಜನೆ ನೀಡಿದ್ದು, ಲೋಕೇಶ್ ಪುಟ್ಟೇಗೌಡ ಸಂಕಲನ, ಕಿರಣ್ ಗಜ ಛಾಯಾಗ್ರಹಣ ಹಾಗೂ ಪ್ರಜ್ವಲ್ ನೃತ್ಯ ನಿರ್ದೇಶನವಿದೆ. ಇದೇ ಜೂನ್ 7ಕ್ಕೆ  ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

Image

For Latest News Updates, Join Our Whatsapp Community🚩
RELATED ARTICLES

Most Popular