ಬೆಂಗಳೂರು : ಬೆಂಗಳೂರಿನ ಜಿ.ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ. ಈ ಬೆನ್ನಲ್ಲೇ ಮತ್ತೋರ್ವ ನಟಿಗೆ ಸಂಕಷ್ಟ ಎದುರಾಗಿದ್ದು, ನಟಿ ಆಶಿರಾಯ್ ಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.
ಜೂನ್ 1 ರಂದು ವಿಚಾರಣೆಗೆ ಹಾಜರಾಗುವಂತೆ ನಟಿ ಆಶಿರಾಯ್ ಗೆ ಸಿಸಿಬಿ ನೋಟಿಸ್ ನೀಡಿದ್ದಾರೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ರೆ ಅವರನ್ನು ಸಿಸಿಬಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ರೇವ್ ಪಾರ್ಟಿ ಪ್ರಕರಣವನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆಯಿಂದ ಹೆಬ್ಬಗೋಡಿ ಠಾಣೆಗೆ ವರ್ಗಾಯಿಸಲಾಗಿದ್ದು, 6 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.A1 ಆರೋಪಿ ವಾಸು, A2 ಅರುಣ್ ಕುಮಾರ್, A3 ನಾಗಬಾಬು, A4 ರಣಧೀರ್ ಬಾಬು, A5 ಮೊಹಮ್ಮದ್ ಅಬೂಬಕ್ಕರ್, A6 ಗೋಪಾಲ ರೆಡ್ಡಿ ಹಾಗೂ A7 68 ಜನ ಪುರುಷರು ಹಾಗೂ A8 30 ಯುವತಿಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.ದಾಳಿ ವೇಳೆ ಕೊಕೇನ್ ಲೇಪನವಿರುವ 500 ಮುಖಬೆಲೆಯ ಒಂದು ನೋಟು, 6 ಗ್ರಾಂ ಹೈಡ್ರೋ ಗಾಂಜಾ, 5 ಮೊಬೈಲ್ ಗಳು ಹಾಗೂ ಎರಡು ಐಷಾರಾಮಿ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.