ಅಲ್ಲು ಅರ್ಜುನ್ ನಟನೆಯ ‘ಪುಷ್ಪ2’ ಚಿತ್ರ ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ಇಂದು ಪುಷ್ಪ ಸಿನಿಮಾದ ಎರಡನೇ ಹಾಡು ಟಿ ಸೀರೀಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಬೆಂಗಾಲಿ ಭಾಷೆಯಲ್ಲಿ ಈ ಹಾಡು ರಿಲೀಸ್ ಆಗಿದ್ದು, ಶ್ರೇಯಾ ಘೋಷಾಲ್ ಧ್ವನಿಯಲ್ಲಿ ಮೂಡಿ ಬಂದಿದೆ. ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ಫಹದ್ ಫಾಸಿಲ್, ಸಾಯಿ ಪಲ್ಲವಿ, ವಿಜಯ್ ಸೇತುಪತಿ, ಶ್ರೀತೇಜ್, ಪ್ರಿಯಾಮಣಿ, ಅನಸೂಯಾ ಭಾರದ್ವಾಜ್, ಜಗಪತಿ ಬಾಬು, ಪ್ರಕಾಶ್ ರಾಜ್, ರಾವ್ ರಮೇಶ್, ಅಜಯ್ ಘೋಷ್, ಬ್ರಹ್ಮಾಜಿ, ದಯಾನಂದ ರೆಡ್ಡಿ, ಸೇರಿದಂತೆ ಹಲವರ ತಾರಾ ಬಳಗವಿದೆ. ನವೀನ್ ನೂಲಿ ಸಂಕಲನವಿದ್ದು, ಗಣೇಶ್ ಆಚಾರ್ಯ ಮತ್ತು ಪ್ರೇಮ್ ರಕ್ಷಿತ್ ಅವರ ನೃತ್ಯ ನಿರ್ದೇಶನವಿದೆ.