ಆಗ್ರಾ ಎನ್ನುತ್ತಿದ್ದಂತೆ ನೆನಪಾಗುವುದು ಅಮೃತಶಿಲೆಯಲ್ಲಿ ನಿರ್ಮಾಣವಾಗಿರುವ ಭವ್ಯ ತಾಜ್ ಮಹಲ್. ಆದರೀಗ ಆಗ್ರಾದ ಮತ್ತೊಂದು ಭವ್ಯ ನಿರ್ಮಾಣವಾದ ಸೋಮಿ ಬಾಗ್ ಸಮಾದ್ ಪ್ರವಾಸಿಗರನ್ನು ಸೆಳೆಯುತ್ತಿದ್ದು, 104 ವರ್ಷಗಳ ಸುದೀರ್ಘ ಸಮಯದ ಈ ನಿರ್ಮಾಣವು ತಾಜ್ ಮಹಲ್ ನಷ್ಟೆ ಸುಂದರವಾಗಿದ್ದು ಪ್ರಶಂಸೆಗೂ ಪಾತ್ರವಾಗುತ್ತಿದೆ. ಇದು ತಾಜ್ ಮಹಲಿಗಿಂತಲೂ ಎತ್ತರವಾಗಿದೆ.
ರಾಧಾ ಸೋಮಿ ಆಧ್ಯಾತ್ಮ ಪಂಥದ ಸೃಷ್ಟಿಕರ್ತರಾದ ಶಿವ್ ದಯಾಳ್ ಸಿಂಗ್ ಸಮಾಧಿಯನ್ನು ತಾಜ್ ಮಹಲ್ ನಿಂದ ಕೇವಲ 12 ಕಿ.ಮೀ. ದೂರದಲ್ಲಿರುವ ಸೋಮಿ ಬಾಗ್ ಎಂಬಲ್ಲಿ ನಿರ್ಮಿಸಲಾಗಿದೆ. ಈ ಸಮಾಧಿಯ ನಿಮಾ೯ಣ ಕಾಯ೯ 1922ರಲ್ಲಿ ಆರಂಭಿಸಲಾಗಿದ್ದು 104 ವರ್ಷಗಳ ನಂತರ ಕಾಯ೯ ಪೂರ್ಣಗೊಂಡಿದ್ದು, 52 ಬಾವಿಗಳ ಅಡಿಪಾಯ ಮೇಲಿನ 193 ಅಡಿ ಎತ್ತ ರದ ಈ ನಿರ್ಮಾಣವು ಸಂಪೂರ್ಣ ಅಮೃತ ಶಿಲೆಯಿಂದಾಗಿದ್ದು, 31.4 ಅಡಿ ಎತ್ತರದ ಚಿನ್ನ ಲೇಪಿತ ಗುಮ್ಮಟ ಹೊಂದಿದೆ.
ಸಂಕೀರ್ಣವಾದ ಅಮೃತಶಿಲೆಯ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ಮತ್ತು ಸೊಂಪಾದ ಉದ್ಯಾನಗಳಿಂದ ಆವೃತವಾಗಿರುವ ಈ ಪವಿತ್ರ ತಾಣವು ಆಗ್ರಾ ನಗರ ದೃಶ್ಯದ ನಡುವೆ ಪ್ರಶಾಂತತೆ ಮತ್ತು ಆತ್ಮಾವಲೋಕನದ ಪ್ರಯಾಣಕ್ಕೆ ಆಹ್ವಾನಿಸುತ್ತದೆ.