HomeKarnatakaBIG NEWS: ಕಲುಷಿತ ನೀರು ಸೇವಿಸಿ 7 ಜನರು ಅಸ್ವಸ್ಥ

BIG NEWS: ಕಲುಷಿತ ನೀರು ಸೇವಿಸಿ 7 ಜನರು ಅಸ್ವಸ್ಥ

ಚಾಮರಾಜನಗರ: ಕಲುಷಿತ ನೀರು ಸೇವಿಸಿ 7 ಜನರು ಅಸ್ವಸ್ಥರಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಧುವನಹಳ್ಳಿಯಲ್ಲಿ ನಡೆದಿದೆ.

ಗ್ರಾಮದ 7 ಜನರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಲುಷಿತ ನೀರು ಸೇವಿಸಿ ಕಳೆದ ಎರಡು ದಿನಗಳಿಂದ ವಾಂತಿ- ಭೇದಿಯಿಂದ ಬಳಲುತಿದ್ದರು. ಅಸ್ವಸ್ಥರನ್ನು ಕೊಳ್ಳೆಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಡಿಯುವ ನೀರಿನ ಪೈಪ್ ಲೈನ್ ನಲ್ಲಿ ಬೇರೆ ನೀರು ಮಿಶ್ರಣಗೊಂಡು ನೀರು ಕಲುಷಿತವಾಗಿದ್ದು, ಗ್ರಾಮಕ್ಕೆ ನೀರು ಪೂರೈಸುತ್ತಿದ್ದ ಪೈಪ್ ಲೈನ್ ಬಂದ್ ಮಾಡಲಾಗಿದೆ. ಟ್ಯಾಂಕರ್ ಮೂಲಕವಾಗಿ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ. ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular