HomeKarnatakaBIG NEWS : 'ಎಲ್ಲೇ ಇದ್ರೂ ಪೊಲೀಸರ ಮುಂದೆ ಶರಣಾಗು' ; ಪ್ರಜ್ವಲ್ ಗೆ...

BIG NEWS : ‘ಎಲ್ಲೇ ಇದ್ರೂ ಪೊಲೀಸರ ಮುಂದೆ ಶರಣಾಗು’ ; ಪ್ರಜ್ವಲ್ ಗೆ ಮಾಜಿ ಪ್ರಧಾನಿ H.D ದೇವೇಗೌಡ ಖಡಕ್ ವಾರ್ನಿಂಗ್

ಬೆಂಗಳೂರು : ಅಶ್ಲೀಲ ಪೆನ್ ಡ್ರೈವ್ ಪ್ರಕರಣದಲ್ಲಿ ಸಿಲುಕಿರುವ ಪ್ರಜ್ವಲ್ ರೇವಣ್ಣ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ವಿದೇಶದಿಂದ ಕೂಡಲೇ ವಾಪಸ್ ಬರುವಂತೆ ಪ್ರಜ್ವಲ್ ಗೆ ಮಾಜಿ ಪ್ರಧಾನಿ ದೇವೇಗೌಡ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ಡಿಡಿ ಈಗಾಗಲೇ ನಾನು ಎಚ್ಚರಿಕೆ ನೀಡಿದ್ದೇನೆ, ಎಲ್ಲೇ ಇದ್ರೂ ಪೊಲೀಸರ ಮುಂದೆ ಶರಣಾಗು,   ಪ್ರಜ್ವಲ್ ಎಲ್ಲಿದ್ದರೂ ಕೂಡ ತಕ್ಷಣ ಹಿಂತಿರುಗಬೇಕು. ಕಾನೂನು ಪ್ರಕ್ರಿಯೆಗೆ ಹಾಜರಾಗಬೇಕು, ಇನ್ನು ಮುಂದೆ ನನ್ನ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದು ಪ್ರಜ್ವಲ್ ಗೆ ಮಾಜಿ ಪ್ರಧಾನಿ ದೇವೇಗೌಡ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಎಷ್ಟು ದಿನ ಈ ಕಳ್ಳ-ಪೊಲೀಸ್ ಆಟ, ಬೇಗ ಬಂದು ಶರಣಾಗು..!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು : ಎಷ್ಟು ದಿನ ಈ ಕಳ್ಳ-ಪೊಲೀಸ್ ಆಟ, ಬೇಗ ಬಂದು ಶರಣಾಗು ಎಂದು ಪ್ರಜ್ವಲ್ ರೇವಣ್ಣಗೆ ಮಾಜಿ ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ಮನವಿ ಮಾಡಿದ್ದರು. ಈ ನೆಲದ ಕಾನೂನು ಇದೆ. ಯಾಕೆ ಹೆದರಬೇಕು. ನನ್ನ ಹಾಗೂ ಹೆಚ್ ಡಿಡಿ ಮೇಲೆ ಗೌರವ ಇದ್ರೆ 24-48 ಗಂಟೆಯೊಳಗೆ ಬಂದು ಶರಣಾಗು ಎಂದು ಹೆಚ್ಡಿಕೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡ ಖಡಕ್ ವಾರ್ನಿಂಗ್ ನೀಡಿದ್ದಾರೆ.

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular