HomeKarnatakaBIG NEWS: ಮುಂದುವರೆದ ಹೆಚ್.ಡಿ. ರೇವಣ್ಣ ಟೆಂಪಲ್ ರನ್; ಗಾಣಗಾಪುರಕ್ಕೆ ಭೇಟಿ; ದತ್ತಾತ್ರೇಯನಿಗೆ ವಿಶೇಷ ಪೂಜೆ

BIG NEWS: ಮುಂದುವರೆದ ಹೆಚ್.ಡಿ. ರೇವಣ್ಣ ಟೆಂಪಲ್ ರನ್; ಗಾಣಗಾಪುರಕ್ಕೆ ಭೇಟಿ; ದತ್ತಾತ್ರೇಯನಿಗೆ ವಿಶೇಷ ಪೂಜೆ

ಕಲಬುರ್ಗಿ: ಲೈಂಗಿಕ ದೌರ್ಜನ್ಯ, ಮಹಿಳೆ ಕಿಡ್ನ್ಯಾಪ್ ಕೇಸ್ ನಲ್ಲಿ ಜಾಮೀನು ಪಡೆದು ಬಿಡುಗಡೆಯಾಗಿರುವ ಶಾಸಕ ಹೆಚ್.ಡಿ.ರೇವಣ್ಣ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಂತೆ ಹೆಚ್.ಡಿ.ರೇವಣ್ಣ ಟೆಂಪಲ್ ರನ್ ಆರಂಭಿಸಿದ್ದು, ಮಗ, ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ ನಲ್ಲಿಯೂ ಸಂಕಷ್ಟ ನಿವಾರಣೆಗಾಗಿ ದೇವರ ಮೊರೆ ಹೋಗುತ್ತಿದ್ದಾರೆ. ಹೆಚ್.ಡಿ.ರೇವಣ್ಣ ಇಂದು ಗಾಣಗಾಪುರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರ ದೇವಾಲಯಕ್ಕೆ ತೆರಳಿರುವ ರೇವಣ್ಣ, ದತ್ತಾತ್ರೇಯ ದೇವರ ದರ್ಶನ ಪಡೆದು, ದತ್ತಾತ್ರೇಯ ನಿರ್ಗುಣ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಗಾಗಿಯೇ ತಮ್ಮೊಂದಿಗೆ ಜೊತೆಯಲ್ಲಿಯೇ ಪುರೋಹಿತರನ್ನೂ ಕರೆದುಕೊಂಡು ಬಂದಿದ್ದು ವಿಶೇಷವಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ಗಂಟೆಗಳ ಕಾಲ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ರೇವಣ್ಣ ಸಂಕಷ್ಟ ನಿವಾರಣೆಗಾಗಿ ಪ್ರಾರ್ಥಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular