ಹೈದರಾಬಾದ್: ಐಷಾರಾಮಿ ಕಾರ್ ನೋಂದಣಿ ಸಂಖ್ಯೆಗೆ ಮಾಲೀಕರೊಬ್ಬರು 25 ಲಕ್ಷ ರೂ. ಪಾವತಿಸಿರುವುದಾಗಿ ತೆಲಂಗಾಣ ರಸ್ತೆ ಸಾರಿಗೆ ಪ್ರಾಧಿಕಾರದ ಜಂಟಿ ಆಯುಕ್ತ ಸಿ. ರಮೇಶ್ ತಿಳಿಸಿದ್ದಾರೆ.
ವಾಹನಗಳ ಫ್ಯಾನ್ಸಿ ನಂಬರ್ ಆನ್ಲೈನ್ ಹರಾಜು ಪ್ರಕ್ರಿಯೆ ಸೋಮವಾರ ನಡೆದಿದ್ದು 9999 ಸಂಖ್ಯೆಯ ನಂಬರ್ ಗೆ 11 ಮಂದಿ ಸ್ಪರ್ಧೆಯಲ್ಲಿದ್ದರು. ಐಷಾರಾಮಿ ಕಾರ್ ನ ಮಾಲೀಕರೊಬ್ಬರು 25,50,002 ರೂ. ನೀಡಿ ಟಿಜಿ09 9999 ನೋಂದಣಿ ಸಂಖ್ಯೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ತೆಲಂಗಾಣದಲ್ಲಿ ಫ್ಯಾನ್ಸಿ ನಂಬರ್ ವಿಚಾರವಾಗಿ ಇದುವರೆಗೆ ಬಿಡ್ ಆದ ಅತ್ಯಧಿಕ ಮೊತ್ತ ಇದಾಗಿದೆ. ಆಗಸ್ಟ್ ನಲ್ಲಿ 9999 ನಂಬರ್ 21.6 ಲಕ್ಷ ರೂಪಾಯಿಗೆ ಆಕ್ಷನ್ ಆಗಿತ್ತು. ಫ್ಯಾನ್ಸಿ ನಂಬರ್ ಆಸಕ್ತಿ ಹೊಂದಿದವರು 50,000 ರೂ. ನೀಡಿ ನಂಬರ್ ಕಾಯ್ದಿರಿಸಬಹುದು. ಆ ನಂಬರ್ ಗೆ ಹೆಚ್ಚಿನ ಆಸಕ್ತರು ಇದ್ದಾಗ ಆಕ್ಷನ್ ಮಾಡಲಾಗುವುದು ಎಂದು ಹೇಳಲಾಗಿದೆ.