ಬೆಂಗಳೂರು: ಶನಿವಾರ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(CSK) ಅನ್ನು 27 ರನ್‌ಗಳಿಂದ ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಐದು ಋತುಗಳಲ್ಲಿ ನಾಲ್ಕನೇ ಬಾರಿಗೆ ಪ್ಲೇಆಫ್ ತಲುಪಿದೆ.
RCBಗೆ ಮಾಜಿ ಸಹ-ಮಾಲೀಕ ವಿಜಯ್ ಮಲ್ಯ ಅಭಿನಂದನೆ ಸಲ್ಲಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2024 ರ ಎಲಿಮಿನೇಟರ್‌ನಲ್ಲಿ ಸ್ಥಾನ ಪಡೆಯಲು ಫಾಫ್ ಡು ಪ್ಲೆಸಿಸ್ ಮತ್ತು ತಂಡ ತಮ್ಮ ಆರನೇ ಪಂದ್ಯವನ್ನು ಗೆದ್ದರು.
RCB ತನ್ನ ಮೊದಲ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋಲು ಅನುಭವಿಸಿದ ನಂತರ ಋತುವಿನ ಆರಂಭದಲ್ಲಿ ತೀವ್ರ ಸಂಕಷ್ಟದಲ್ಲಿತ್ತು. ಆದಾಗ್ಯೂ, ಆಟಗಾರರು ಪ್ರತಿಕೂಲ ಸಮಯದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿ ಹಾಲಿ ಚಾಂಪಿಯನ್‌ಗಳನ್ನು ಸ್ಪರ್ಧೆಯಿಂದ ಹೊರಹಾಕಿದರು ಮತ್ತು ಪಾಯಿಂಟ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದ ತಂಡವಾಗಿ ಪ್ಲೇ ಆಫ್‌ಗೆ ಪ್ರವೇಶಿಸಿದರು.
ಇದಕ್ಕಾಗಿ ಮಲ್ಯ ಆರ್.ಸಿ.ಬಿ.ಯನ್ನು ಅಭಿನಂದಿಸಿದ್ದಾರೆ. ಟಾಪ್ ನಾಲ್ಕರಲ್ಲಿ ಅರ್ಹತೆ ಗಳಿಸಿದ್ದಕ್ಕಾಗಿ ಮತ್ತು ಐಪಿಎಲ್ ಪ್ಲೇಆಫ್ ತಲುಪಿದ್ದಕ್ಕಾಗಿ ಆರ್‌ಸಿಬಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿರಾಶಾದಾಯಕ ಆರಂಭದ ನಂತರ ಉತ್ತಮ ನಿರ್ಣಯ ಮತ್ತು ಕೌಶಲ್ಯವು ಮುಂದೆ ಟ್ರೋಫಿಯ ಕಡೆಗೆ ಗೆಲುವಿನ ವೇಗವನ್ನು ಸೃಷ್ಟಿಸಿದೆ ಎಂದು ತಿಳಿಸಿದ್ದಾರೆ.