ಬೆಂಗಳೂರು: ಆಡಳಿತ ಸುಧಾರಣಾ ಆಯೋಗ -2ರ ವರದಿಯ ಶಿಫಾರಸ್ಸು ಅನ್ವಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಅಡಿಯಲ್ಲಿ ಹೊಸ ಸೇವೆಗಳನ್ನು ಸಕಾಲ ಕಾಯ್ದೆಯಡಿ ಅಧಿಸೂಚಿಸಲು ಸಕಾಲ ಮಿಷನ್ ಗೆ ಅವಶ್ಯಕ ಪ್ರಸ್ತಾವನೆ ಸಲ್ಲಿಸುವಂತೆ ಶಿಕ್ಷಣ ಇಲಾಖೆಯ ಸಕಾಲ ನೋಡಲ್ ಅಧಿಕಾರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಕಾಲ ಮಿಷನ್ ಆಡಳಿತಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಡಿಯಲ್ಲಿ ವರ್ಗಾವಣೆ ಪತ್ರ ವಿತರಣೆ, ನಡತೆ ಪ್ರಮಾಣ ಪತ್ರ, ಅಧ್ಯಯನ ಪ್ರಮಾಣ ಪತ್ರ, ನೋ ಡ್ಯೂ ಸರ್ಟಿಫಿಕೇಟ್, ಲೈಬ್ರರಿ ನೋ ಡ್ಯೂ ಸರ್ಟಿಫಿಕೇಟ್, ಅಂಕಪಟ್ಟಿ, ಹೆಸರು ಪರಿಷ್ಕರಣೆ ಸೇರಿದಂತೆ 30 ಸೇವೆಗಳನ್ನು ಅಧಿಸೂಚಿಸಲು ಪ್ರಸ್ತಾಪಿಸಲಾಗಿದೆ.
ಅದೇ ರೀತಿ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ 31 ಸೇವೆಗಳನ್ನು ಅಧಿಸೂಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ಶಿಪ್ ಸೇವೆಯನ್ನು ಸಕಾಲ ಕಾಯ್ದೆ ಅಡಿ ಅಧಿಸೂಚನೆಗಾಗಿ ಸಕಾಲ ಮಿಷನ್ ಪ್ರಸ್ತಾವನೆ ಕಳುಹಿಸಲು ಕೋರಲಾಗಿದೆ.