alex Certify ಹೈವೋಲ್ಟೇಜ್ RCB-CSK ಪಂದ್ಯದ ಟಿಕೆಟ್ ಬೆಲೆ ಗಗನಕ್ಕೆ: ಅಭಿಮಾನಿಗಳ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈವೋಲ್ಟೇಜ್ RCB-CSK ಪಂದ್ಯದ ಟಿಕೆಟ್ ಬೆಲೆ ಗಗನಕ್ಕೆ: ಅಭಿಮಾನಿಗಳ ಆಕ್ರೋಶ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು- ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಹತ್ವದ ಪಂದ್ಯ ನಡೆಯಲಿದೆ.

ಪ್ಲೇ ಆಫ್ ಗೇರಲು ಎರಡೂ ತಂಡಗಳಿಗೆ ಪಂದ್ಯದ ಗೆಲುವು ಬಹಳ ಮುಖ್ಯವಾಗಿದ್ದು, ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಆದರೆ, ಈಗಾಗಲೇ ಪಂದ್ಯದ ಎಲ್ಲಾ ಟಿಕೆಟ್ ಗಳು ಮಾರಾಟವಾಗಿವೆ.

ನಾಳೆ ನಡೆಯಲಿರುವ ಪಂದ್ಯದ ಟಿಕೆಟ್ ಗಳು ಈ ಹಿಂದೆಯೇ ಆನ್ಲೈನ್ ನಲ್ಲಿ ಮಾರಾಟವಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಾವಿರಾರು ಅಭಿಮಾನಿಗಳು ಟಿಕೆಟ್ ಗಾಗಿ ಜಮಾಯಿಸಿದ್ದಾರೆ. ಆದರೆ, ಈಗಾಗಲೇ ಟಿಕೆಟ್ ಸೋಲ್ಡೌಟ್ ಆಗಿರುವುದರಿಂದ ಅಭಿಮಾನಿಗಳಿಗೆ ಟಿಕೆಟ್ ಸಿಗುತ್ತಿಲ್ಲ.

ಬ್ಲಾಕ್ ನಲ್ಲಿ ಟಿಕೆಟ್ ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕ್ರೀಡಾಂಗಣದವರೇ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. ಆನ್ಲೈನ್ ನಲ್ಲಿ ಟಿಕೆಟ್ ಸೋಲ್ದೌಟ್ ಮಾಡಿ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. 1500 ರೂ. ಟಿಕೆಟ್ ಗೆ 10 ಸಾವಿರ ರೂ., 3000 ರೂ. ಬೆಲೆಯ ಟಿಕೆಟ್ಗೆ 15 ರಿಂದ 20 ಸಾವಿರ ರೂಪಾಯಿ ಕೇಳಲಾಗುತ್ತಿದೆ ಎಂದು ಅಭಿಮಾನಿಗಳು ದೂರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...