ಚಾರ್ ಧಾಮ್ ಯಾತ್ರೆ: ದೇವಾಲಯಗಳ 50 ಮೀಟರ್ ವ್ಯಾಪ್ತಿಯಲ್ಲಿ ರೀಲ್ಸ್ ನಿಷೇಧ: ಮೇ 31 ರವರೆಗೆ ವಿಐಪಿ ದರ್ಶನ ಇಲ್ಲ

ಚಮೋಲಿ(ಉತ್ತರಾಖಂಡ): ಚಾರ್ ಧಾಮ್ ಯಾತ್ರೆ ವೇಳೆ ದೇವಾಲಯಗಳ 50 ಮೀಟರ್ ವ್ಯಾಪ್ತಿಯೊಳಗೆ ‘ರೀಲ್‌ಗಳನ್ನು ತಯಾರಿಸುವುದನ್ನು’ ನಿಷೇಧಿಸಲಾಗಿದೆ.  ಮೇ 31 ರವರೆಗೆ ವಿಐಪಿ ದರ್ಶನ ಇರುವುದಿಲ್ಲ.

ಉತ್ತರಾಖಂಡ ಸರ್ಕಾರವು ಗುರುವಾರ ‘ಚಾರ್ ಧಾಮ್’ಗಳಲ್ಲಿ(ನಾಲ್ಕು ತೀರ್ಥಕ್ಷೇತ್ರಗಳು – ಕೇದಾರನಾಥ, ಬದರಿನಾಥ್, ಯಮುನೋತ್ರಿ ಮತ್ತು ಗಂಗೋತ್ರಿ) ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ನಿರ್ಧರಿಸಿದೆ.

ಮೇ 31 (ಶುಕ್ರವಾರ) ವರೆಗೆ ಚಾರ್ ಧಾಮ್‌ಗಳಲ್ಲಿ ಪ್ರಮುಖ ವ್ಯಕ್ತಿಗಳ (ವಿಐಪಿ) ದರ್ಶನಕ್ಕೆ ಯಾವುದೇ ವ್ಯವಸ್ಥೆಗಳಿಲ್ಲ ಮತ್ತು ಹರಿದ್ವಾರ ಮತ್ತು ರಿಷಿಕೇಶದಲ್ಲಿ ಆಫ್‌ಲೈನ್ ನೋಂದಣಿ ಮೇ 19 (ಭಾನುವಾರ) ವರೆಗೆ ಮುಚ್ಚಿರುತ್ತದೆ ಎಂದು ಮುಖ್ಯ ಕಾರ್ಯದರ್ಶಿ ರಾಧಾ ರತುರಿ ತಿಳಿಸಿದ್ದಾರೆ.

ರೀಲ್ಸ್ ನಿಷೇಧ

ದೇವಾಲಯಗಳ 50 ಮೀಟರ್ ವ್ಯಾಪ್ತಿಯಲ್ಲಿ ವಿಡಿಯೋಗ್ರಫಿ ಮತ್ತು ಸಾಮಾಜಿಕ ಮಾಧ್ಯಮ ರೀಲ್‌ಗಳ ಮೇಕಿಂಗ್ ಮೇಲೆ ನಿಷೇಧ ಹೇರಲಾಗಿದೆ. ಕೆಲವು ಯಾತ್ರಾರ್ಥಿಗಳಿಂದ ದೇವಾಲಯಗಳ ಆವರಣದಲ್ಲಿ ವೀಡಿಯೊಗ್ರಫಿ ಮಾಡಲಾಗುತ್ತಿದೆ ಮತ್ತು ರೀಲ್‌ಗಳನ್ನು ಮಾಡಲಾಗುತ್ತಿದೆ, ಇದರಿಂದಾಗಿ ಜನರು ಒಂದೇ ಸ್ಥಳದಲ್ಲಿ ಸೇರುತ್ತಾರೆ, ಇದರಿಂದ ಅನಾನುಕೂಲತೆ ಉಂಟಾಗುತ್ತದೆ. ಹೀಗಾಗಿ ರೀಲ್ಸ್ ಮಾಡುವುದನ್ನು ಬ್ಯಾನ್ ಮಾಡಲಾಗಿದೆ.

ಮೇ 10 ರಂದು(ಶುಕ್ರವಾರ) ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ತೀರ್ಥಯಾತ್ರೆಯ ಮೊದಲ ಆರು ದಿನಗಳಲ್ಲಿ, ಬುಧವಾರದವರೆಗೆ ಭಾರತ ಮತ್ತು ವಿದೇಶಗಳಿಂದ ಕನಿಷ್ಠ 3,34,732 ಜನರು ಪ್ರಾರ್ಥನೆ ಸಲ್ಲಿಸಲು ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಏಪ್ರಿಲ್ 25 ರಂದು ಯಾತ್ರೆಗೆ ನೋಂದಣಿ ಆರಂಭವಾಗಿದ್ದು, ಗುರುವಾರ ಸಂಜೆಯವರೆಗೆ 27 ಲಕ್ಷಕ್ಕೂ ಹೆಚ್ಚು ಭಕ್ತರು ನೋಂದಣಿ ಮಾಡಿಕೊಂಡಿದ್ದಾರೆ.

ಭಕ್ತರಿಗೆ ನೋಂದಣಿ ಕಡ್ಡಾಯ

ಏಪ್ರಿಲ್ 30 ರಂದು ಇತರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದ ಪ್ರಕಾರ, ಮೇ 25 ರವರೆಗೆ ದೇವಾಲಯಗಳಲ್ಲಿ ವಿಐಪಿ ದರ್ಶನಕ್ಕೆ ಅವಕಾಶ ನೀಡಬಾರದು. ಯಾತ್ರೆಗೆ ಪೂರ್ವ ನೋಂದಣಿ ಕಡ್ಡಾಯವಾಗಿದೆ ಮತ್ತು ಭಕ್ತರು ನೋಂದಣಿ ಸಮಯದಲ್ಲಿ ಅವರಿಗೆ ನಿಗದಿಪಡಿಸಲಾದ ದಿನಾಂಕಗಳಂದು ಮಾತ್ರ ದರ್ಶನ ಪಡೆಯಬಹುದು.

https://twitter.com/ANI/status/1791268813759238179

https://twitter.com/ANI/status/1791270916892266944

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read