HomeKarnatakaBIG BREAKING: ಲೈಂಗಿಕ ದೌರ್ಜನ್ಯದ ಕೇಸ್ ನಲ್ಲೂ 'ಬೇಲ್' ಕೋರಿ ನ್ಯಾಯಾಲಯಕ್ಕೆ ರೇವಣ್ಣ ಅರ್ಜಿ

BIG BREAKING: ಲೈಂಗಿಕ ದೌರ್ಜನ್ಯದ ಕೇಸ್ ನಲ್ಲೂ ‘ಬೇಲ್’ ಕೋರಿ ನ್ಯಾಯಾಲಯಕ್ಕೆ ರೇವಣ್ಣ ಅರ್ಜಿ

ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿದ್ದ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಬಂಧನಕ್ಕೆ ಒಳಗಾಗಿ ಜೈಲು ಪಾಲಾಗಿದ್ದರು. ಇದೀಗ ಅವರು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಜಾಮೀನು ದೊರೆತ ಬಳಿಕ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಹೊರಬಂದಿರುವ ರೇವಣ್ಣನವರು ದೇವರ ಮೊರೆ ಹೋಗಿದ್ದಾರೆ. ಸತತವಾಗಿ ಟೆಂಪಲ್ ರನ್ ನಡೆಸುತ್ತಿರುವ ಅವರು, ಮತ್ತೊಂದು ಕೇಸ್ ಹಿನ್ನೆಲೆಯಲ್ಲಿ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ರೇವಣ್ಣನವರ ವಿರುದ್ಧ ಅವರ ಮನೆ ಕೆಲಸದಾಕೆ ಲೈಂಗಿಕ ದೌರ್ಜನ್ಯದ ದೂರು ದಾಖಲಿಸಿದ್ದು, ಈ ಹಿನ್ನಲೆಯಲ್ಲಿ ತಮ್ಮ ವಕೀಲರ ಮೂಲಕ ನ್ಯಾಯಾಲಯದಲ್ಲಿ ಹಾಜರಾದ ರೇವಣ್ಣನವರು ಈ ಪ್ರಕರಣದಲ್ಲಿ ತಮಗೆ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular