ಟಿ20 ವಿಶ್ವಕಪ್ ನಲ್ಲಿ ಕೆಎಂಎಫ್ ಪ್ರಾಯೋಜಕತ್ವ: ಜಾಗತಿಕ ಬ್ರ್ಯಾಂಡ್ ಆಗಿ ರಾರಾಜಿಸಲಿದೆ ‘ನಂದಿನಿ’

ಬೆಂಗಳೂರು: ಜೂನ್ ನಲ್ಲಿ ನಡೆಯಲಿರುವ ಟಿ20 ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಆಟಗಾರರ ಜೆರ್ಸಿಯ ಮೇಲೆ ನಂದಿನಿ ಬ್ರ್ಯಾಂಡ್ ಲಾಂಛನ ರಾರಾಜಿಸಲಿದೆ.

ನಂದಿನಿ ಬ್ರ್ಯಾಂಡ್ ಮೌಲ್ಯ ವೃದ್ಧಿ ಮತ್ತು ಮಾರುಕಟ್ಟೆ ವಿಸ್ತರಣೆ ನಿಟ್ಟಿನಲ್ಲಿ ಕೆಎಂಎಫ್ ನಂದಿನಿ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಪ್ರಾಯೋಜಕತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

ದೇಶದ ಸಹಕಾರಿ ವಲಯದ ಹೈನು ಉದ್ಯಮದಲ್ಲಿ ಎರಡನೇ ಸ್ಥಾನದಲ್ಲಿರುವ ಕೆಎಂಎಫ್, ಗುಜರಾತ್ ನ ಅಮೂಲ್ ರೀತಿಯಲ್ಲೇ ನಂದಿನಿಯನ್ನು ಜಾಗತಿಕ ಬ್ರ್ಯಾಂಡ್ ಆಗಿ ಪರಿವರ್ತಿಸಲು ಈ ಮಹತ್ವದ ಹೆಜ್ಜೆ ಇಟ್ಟಿದೆ. ಮುಂದೆ ಐಪಿಎಲ್, ವಿಶ್ವಕಪ್ ಕ್ರಿಕೆಟ್, ಒಲಿಂಪಿಕ್ಸ್ ನಲ್ಲೂ ಪ್ರಯೋಜಕತ್ವ ಪಡೆಯುವ ನಿಟ್ಟಿನಲ್ಲಿ ಕೆಎಂಎಫ್ ಪ್ರಯತ್ನ ನಡೆಸಿದೆ.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ಆಡಳಿತ ಮಂಡಳಿಯೊಂದಿಗೆ ವರ್ಚುಯಲ್ ಮಾದರಿಯಲ್ಲಿ ಮಾತುಕತೆ ನಡೆಸಲಾಗಿದೆ.

ಇದೇ ಮೊದಲ ಬಾರಿಗೆ ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಕ್ರಿಕೆಟ್ ತಂಡಗಳಿಗೆ ಕೆಎಂಎಫ್ ಪ್ರಾಯೋಜಕತ್ವ ನೀಡಲಿದ್ದು, ಈ ತಂಡಗಳ ಆಟಗಾರರ ಜೆರ್ಸಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ನಂದಿನಿ ಎಂದು ಬರೆದ ಲಾಂಛನ ಇರುತ್ತದೆ. ಇವೆರಡು ತಂಡಗಳ ಆಟಗಾರರು ಕೆಎಂಎಫ್ ನಂದಿನಿ ಜಾಹೀರಾರು, ಅಭಿಯಾನ, ಫೋಟೋ ಶೂಟ್ ಗಳಲ್ಲಿ ಭಾಗವಹಿಸಲಿದ್ದಾರೆ.

ಅಲ್ಲದೇ ವಿಶ್ವಕಪ್ ವೇಳೆ ಕೆಎಂಎಫ್ ಉತ್ಪನ್ನಗಳು ಅಮೆರಿಕದಲ್ಲಿ ಲಭ್ಯವಿರಲಿದ್ದು, ಕರ್ನಾಟಕದ ಬ್ರ್ಯಾಂಡ್ ಗೆ ಜಾಗತಿಕ ಮನ್ನಣೆ ಸಿಗುವಂತೆ ಮಾಡುವುದು ನಮ್ಮ ಗುರಿಯಾಗಿದೆ. ಎಂದು ಎಂ.ಕೆ. ಜಗದೀಶ್ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read