ನಿಮ್ಮ ಕಣ್ಣಿಗೆ ಮತ್ತು ಮೆದುಳಿಗೆ ಕಸರತ್ತು ನೀಡುವ ಆಪ್ಟಿಕಲ್ ಇಲ್ಯೂಷನ್ ನಂತಹ ಸವಾಲುಗಳನ್ನು ನೋಡುತ್ತಲೇ ಇರುತ್ತೀರಿ. ಇಂತಹ ಸವಾಲುಗಳನ್ನು ಪರಿಹರಿಸುವ ಪ್ರಯತ್ನದಲ್ಲಿ ಸಾಕಷ್ಟು ಗೊಂದಲಕ್ಕೊಳಗಾಗುತ್ತಾರೆ. ಮಿದುಳಿನ ಕಸರತ್ತುಗಳು ಮತ್ತು ಒಗಟುಗಳ ಪ್ರತಿಪಾದಕರಾದ ಡಾ. ಮೈಕ್ ಡೇವಿಸ್ ಟ್ವಿಟರ್ ನಲ್ಲಿ ಇಂತಹ ಆಪ್ಟಿಕಲ್ ಇಲ್ಯೂಷನ್ ಸವಾಲೊಂದನ್ನು ಹಂಚಿಕೊಂಡಿದ್ದಾರೆ.
A ನಿಂದ Z ವರೆಗಿನ ಇಂಗ್ಲಿಷ್ ವರ್ಣಮಾಲೆಯನ್ನು ಒಳಗೊಂಡಿರುವ ಸವಾಲನ್ನು ಹಂಚಿಕೊಂಡಿದ್ದು ಇದರಲ್ಲಿನ ದೋಷವನ್ನು 5 ಸೆಕೆಂಡ್ ನೊಳಗೆ ಗುರುತಿಸಬಲ್ಲಿರಾ ಎಂದು ಪ್ರಶ್ನಿಸಿದ್ದಾರೆ.
ಇದು ಟ್ವಿಟರ್ ನಲ್ಲಿ ಗಮನ ಸೆಳೆದಿದ್ದು, ಹೆಚ್ಚಿನ ವೀಕ್ಷಣೆ ಗಳಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಇದರಲ್ಲಿನ ಸವಾಲನ್ನು ಬಿಡಿಸಲು ವಿಫಲರಾಗಿದ್ದು “ನಾನು ಅದನ್ನು ಕಂಡುಹಿಡಿಯಲಾಗಲಿಲ್ಲ,” “ನನಗೆ ಅದನ್ನು ಹುಡುಕಲಾಗಲಿಲ್ಲ!” ದೋಷವನ್ನು ಹುಡುಕಲು ಎರಡು ಬಾರಿ ಓದಲಾಯಿತು ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ.
(ಇದಕ್ಕೆ ಉತ್ತರ ಎಂ ಮಾತ್ರ ಸ್ಮಾಲ್ ಲೆಟರ್ ನಲ್ಲಿದೆ)