ಮೇ 17ಕ್ಕೆ ಮರು ಬಿಡುಗಡೆಯಾಗಲಿದೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘A’

Comedy Kings - Upendra Emotional Scene - Upendra, Chandni - HD - video Dailymotion

ಸ್ಯಾಂಡಲ್ವುಡ್ ನಲ್ಲಿ ತಮ್ಮ ವಿಶಿಷ್ಟ ಚಿತ್ರಗಳ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿರುವ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸುವ ಮೂಲಕ ಚೊಚ್ಚಲ ಬಾರಿ ನಾಯಕನಾಗಿ ಅಭಿನಯಿಸಿದ್ದ ‘A’ ಚಿತ್ರ ಇದೇ ಮೇ 17ಕ್ಕೆ ಮರು ಬಿಡುಗಡೆಯಾಗಲಿದೆ. ಈ ಕುರಿತು ಉಪೇಂದ್ರ ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ‘ಓಂ’ ‘ತರ್ಲೆ ನನ್ ಮಗ’ ‘ಆಪರೇಷನ್ ಅಂತ’ ಮೂಲಕ ನಿರ್ದೇಶಕನಾಗಿ ಜನಪ್ರಿಯತೆ ಪಡೆದಿದ್ದ, ಉಪೇಂದ್ರ ಅವರು 1998ರಲ್ಲಿ ‘A’ ಸಿನಿಮಾವನ್ನು ನಿರ್ದೇಶಿಸುವ ಮೂಲಕ ನಾಯಕ ನಟನಾಗಿ ಅಭಿನಯಿಸಿದರು. ಉಪೇಂದ್ರ ಅವರ ವಿಭಿನ್ನ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದರು.

ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಸೇರಿದಂತೆ ಚಾಂದಿನಿ, ಅರ್ಚನಾ, ಮರಿನಾ, ಬಿರಾದರ್, ಸುಚಿತ್ರ ಮೈಕಲ್ ಮಧು, ತುಮಕೂರು ಮೋಹನ್, ಗುರುಕಿರಣ್, ಬಾಲು ಮುರುಘರಾಜ್, ನರೇಂದ್ರಬಾಬು, ಮತ್ತು ಪುಟ್ಟರಾಜು ತೆರೆ ಹಂಚಿಕೊಂಡಿದ್ದಾರೆ. ಉಪ್ಪಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ  ಜಗನ್ನಾಥ್ ಮತ್ತು ಮಂಜುನಾಥ್ ನಿರ್ಮಾಣ ಮಾಡಿದ್ದಾರೆ.  ಗುರುಕಿರಣ್ ಸಂಗೀತ ಸಂಯೋಜನೆ ನೀಡಿದ್ದು, ಶಶಿಕುಮಾರ್ ಸಂಕಲನವಿದೆ.

https://twitter.com/nimmaupendra/status/1789305221514244193

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read