HomeKarnatakaBIG NEWS: ಹೊಳೆನರಸೀಪುರ ಪೊಲೀಸರಿಂದ ವಕೀಲ ದೇವರಾಜೇಗೌಡ ವಿಚಾರಣೆ

BIG NEWS: ಹೊಳೆನರಸೀಪುರ ಪೊಲೀಸರಿಂದ ವಕೀಲ ದೇವರಾಜೇಗೌಡ ವಿಚಾರಣೆ

ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋ ಇರುವ ಪೆನ್ ಡ್ರೈವ್ ತೋರಿಸಿ ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಮಾಡಿರುವ ಪ್ರಕರಣದಲ್ಲಿ ಬಂಧಿತರಾಗಿರುವ ವಕೀಲ ದೇವರಾಜೇಗೌಡ ಅವರನ್ನು ವಿಚಾರಣೆಗಾಗಿ ಹೊಳೆನರಸೀಪುರ ವೃತ್ತ ನಿರೀಕ್ಷಕರ ಕಚೇರಿಗೆ ಕರೆತರಲಾಗಿದೆ.

ಹಾಸನ ಎ ಎಸ್ ಪಿ, ದೇವರಾಜೇಗೌಡ ಅವರ ವಿಚಾರಣೆ ನಡೆಸುತ್ತಿದ್ದು, ಅವರಿಗೆ ಪೆನ್ ಡ್ರೈವ್ ಸಿಕ್ಕಿರುವ ಹಾಗೂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಕುರಿತು ಪ್ರಶ್ನಿಸುತ್ತಿದ್ದಾರೆ ಎನ್ನಲಾಗಿದೆ.

ವಿಚಾರಣೆ ಪೂರ್ಣಗೊಂಡ ಬಳಿಕ ದೇವರಾಜೇಗೌಡ ಅವರನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಲಿದ್ದು, ಮತ್ತಷ್ಟು ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular