ಸುಂದರವಾಗಿ ಕಾಣಲು ಇಂಥಾ ಯಡವಟ್ಟು ಮಾಡಿಕೊಂಡಿದ್ದಾಳೆ ಯುವತಿ; ಮದುವೆಗೆ ಸಂಗಾತಿಯೂ ಸಿಗದೇ ಕಂಗಾಲು….!

ಸೌಂದರ್ಯ ಬಹಳ ಮುಖ್ಯ. ಆದ್ರೆ ಇತ್ತೀಚಿನ ದಿನಗಳಲ್ಲಿ ಸುಂದರವಾಗಿ ಕಾಣಲು ಜನರು ಲಕ್ಷಾಂತರ ರೂಪಾಯಿ ಹಣ ಮತ್ತು ಸಮಯವನ್ನು ವ್ಯಯಿಸಲು ಪ್ರಾರಂಭಿಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿ, ಫಿಲ್ಲರ್‌ಗಳಿಂದ ಹಿಡಿದು ಇಂಪ್ಲಾಂಟ್‌ಗಳವರೆಗೆ ಎಲ್ಲವೂ ಈಗ ಕಾಮನ್.‌

ಬಲ್ಗೇರಿಯಾದ ನಿವಾಸಿ ಆಂಡ್ರಿಯಾ ಇವನೊವಾ ಎಂಬಾಕೆ ಇದೀಗ ಅತಿದೊಡ್ಡ ತುಟಿಗಳನ್ನು ಹೊಂದಿದ ಮಹಿಳೆ ಎನಿಸಿಕೊಂಡಿದ್ದಾಳೆ. ತುಟಿಗಳನ್ನು ದಪ್ಪಗಾಗಿಸಿಕೊಳ್ಳಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾಳೆ. ವಿಶ್ವದಲ್ಲೇ ಅತಿ ದೊಡ್ಡ ತುಟಿಗಳನ್ನು ಪಡೆಯಲು ಆಂಡ್ರಿಯಾ ಒಂದೇ ದಿನದಲ್ಲಿ ಆರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ವೈದ್ಯರು ಆರಂಭದಲ್ಲಿ ಈ ಪ್ರಕ್ರಿಯೆಗೆ ಒಪ್ಪಿರಲಿಲ್ಲ. ಈ ಶಸ್ತ್ರಚಿಕಿತ್ಸೆಗೆ ಸುಮಾರು 21 ಲಕ್ಷ ರೂಪಾಯಿ ಖರ್ಚಾಗಿದೆ.

ಸೌಂದರ್ಯ ಹೆಚ್ಚಿಸಿಕೊಳ್ಳಲು ಹೋಗಿ ಈ ಮಹಿಳೆ ಫಜೀತಿ ಅನುಭವಿಸ್ತಿದ್ದಾಳೆ. ಅವಳ ದಪ್ಪನೆಯ ತುಟಿಗಳಿಂದಾಗಿ ಜೀವನ ಸಂಗಾತಿಯನ್ನು ಹುಡುಕಲು ತೊಂದರೆಯಾಗುತ್ತಿದೆಯಂತೆ. ಆಂಡ್ರಿಯಾಗೆ ಈಗ 26 ವರ್ಷ. ಆಕೆಯ ಲುಕ್‌ ಬಗ್ಗೆ ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.

ಇಂತಹ ಅಪಾಯಕಾರಿ ಸರ್ಜರಿಗಳ ಬಗ್ಗೆ ಅನೇಕರು ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಆಲೋಚನೆಗಳು ಬಂದಾಗಲೆಲ್ಲ ಮನಃಶಾಸ್ತ್ರಜ್ಞರನ್ನು ಸಂಪರ್ಕಿಸಬೇಕೆಂದು ನೆಟ್ಟಿಗರು ಆಕೆಗೆ ಸಲಹೆ ನೀಡಿದ್ದಾರೆ. ಸಂಗಾತಿ ಸಿಗದೇ ಒಂಟಿತನ ಅನುಭವಿಸುತ್ತಿರುವ ಆಂಡ್ರಿಯಾ ಹೆಸರು ಶಸ್ತ್ರಚಿಕಿತ್ಸೆಗೆ ಒಳಗಾದ ನಂತರವೂ ದಾಖಲೆಯ ಪುಟ ಸೇರಿಲ್ಲ. ವಿಶ್ವದ ಅತಿ ದೊಡ್ಡ ತುಟಿ ಹೊಂದಿದ್ದಾಳೆಂದು ಆಕೆಯ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿಲ್ಲ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read