ಖ್ಯಾತ ಪತ್ರಕರ್ತ ಪ್ರದೀಪ್ ಭಂಡಾರಿ ಝೀ ನ್ಯೂಸ್ಗೆ ರಾಜೀನಾಮೆ ನೀಡಿದ್ದಾರೆ. ಬುಧವಾರ ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ.
“ನಾನು ಜೀ ನ್ಯೂಸ್ಗೆ ರಾಜೀನಾಮೆ ನೀಡಿದ್ದೇನೆ. ನಾನು ನಿಮ್ಮ ನೆಚ್ಚಿನ ಕಾರ್ಯಕ್ರಮಗಳಾದ ಸಂಜೆ 5 ಗಂಟೆಯ ತಾಲ್ ಥೋಕ್ ಕೆ, ರಾತ್ರಿ 8 ಗಂಟೆಯ ಆಪ್ಕಾ ಸವಾಲ್ ಮತ್ತು ರಾತ್ರಿ 10 ಗಂಟೆಯ 24 ಕಿ ಸರ್ಕಾರ್ ಮತ್ತು ಈಗಿನ ಚುನಾವಣಾ ಸಂದರ್ಭದಲ್ಲಿನ ಎಕ್ಸಿಟ್ ಪೋಲ್ ಅನ್ನು ಝೀ ನ್ಯೂಸ್ ನಲ್ಲಿ ನಡೆಸಿಕೊಡುವುದಿಲ್ಲ” ಎಂದಿದ್ದಾರೆ.
ಗಮನಾರ್ಹವಾಗಿ, ಝೀ ಮೀಡಿಯಾ ಕಾರ್ಪೊರೇಷನ್ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಭಯ್ ಓಜಾ ಅವರನ್ನು ಸೇವೆಯಿಂದ ತೆಗೆದುಹಾಕಿದ ನಂತರ ಭಂಡಾರಿ ಅವರು ರಾಜೀನಾಮೆ ನೀಡಿದ್ದಾರೆ. ಓಜಾ ಅವರನ್ನು ಮೇ 4, 2024 ರಂದು ವಜಾಗೊಳಿಸಲಾಯಿತು. ಆದಾಗ್ಯೂ, ಕಂಪನಿಯು ಅವರ ವಜಾಕ್ಕೆ ಕಾರಣಗಳನ್ನು ವಿವರಿಸಲಿಲ್ಲ.
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಅವರ ಚುನಾವಣಾ ರ್ಯಾಲಿಯ ನೇರ ಪ್ರಸಾರವನ್ನು ಝೀ ನ್ಯೂಸ್ ನಿಷೇಧಿಸಿದೆ ಎಂಬ ವದಂತಿಗಳ ನಡುವೆ ಪ್ರದೀಪ್ ಭಡಾರಿ ರಾಜೀನಾಮೆ ನೀಡಿರುವುದು ಕುತೂಹಲ ಮೂಡಿಸಿದೆ.