HomeEntertainment'ಕಂಡೋರ್ ಮನೆ ಕಥೆ' ಚಿತ್ರದ ಸೋಂಬೇರಿ ಹಾಡು ರಿಲೀಸ್

‘ಕಂಡೋರ್ ಮನೆ ಕಥೆ’ ಚಿತ್ರದ ಸೋಂಬೇರಿ ಹಾಡು ರಿಲೀಸ್

ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ನಾಯಕ ನಟನಾಗಿ ಅಭಿನಯಿಸಿರುವ ‘ಕಂಡೋರ್ ಮನೆ ಕಥೆ’ ಚಿತ್ರದ ಸೋಂಬೇರಿ ಎಂಬ ವಿಡಿಯೋ ಹಾಡು ಇಂದು youtube ನಲ್ಲಿ ಬಿಡುಗಡೆ ಮಾಡಲಾಗಿದೆ. ನವೀನ್ ಸಜ್ಜು ಈ ಹಾಡಿಗೆ ಧ್ವನಿಯಾಗಿದ್ದು, ಜಾನ್ ಕೆನ್ನಡಿ ಸಂಗೀತ ಸಂಯೋಜನೆ ನೀಡಿದ್ದಾರೆ. ಗೌತಮ್ ಯಶೋಧರ ಸಾಹಿತ್ಯ ಬರೆದಿದ್ದಾರೆ.

ಕಾಮಿಡಿ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಮನ  ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಮಂಜುಳಾ ನಿರ್ಮಾಣ ಮಾಡಿದ್ದು, ಸೂರಜ್ ಸೇರಿದಂತೆ  ಅಪೂರ್ವ ಶ್ರೀ, ರಕ್ಷಿತಾ ಕೆರೆಮನೆ, ರಮಿತ್ ಏಲಕ್ಕಿ, ದೀರವ್ ಶ್ರೀವಾತ್ಸ, ಮತ್ತು ಡಿಂಗ್ರಿ ನಾಗರಾಜ್  ತೆರೆ ಹಂಚಿಕೊಂಡಿದ್ದಾರೆ. ಲೋಕೇಶ್ ಪುಟ್ಟೇಗೌಡ ಸಂಕಲನ, ಮತ್ತು ಕಿರಣ್ ಗಜ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular