ಕರ್ನಾಟಕದಲ್ಲಿ ಮಂಗಳವಾರದಂದು 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆದಿದ್ದು, ಬಿರು ಬಿಸಿಲಿನಲ್ಲೂ ಮತದಾರರು ಉತ್ಸಾಹದಿಂದ ಮತದಾನ ಮಾಡಿದ್ದಾರೆ.
ಮತದಾನ ಸಂದರ್ಭದಲ್ಲಿ ಬೀದರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಯಡವಟ್ಟೊಂದನ್ನು ಮಾಡಿದ್ದು, ಅವರ ವಿರುದ್ಧ ಈಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದರ್ ಜಿಲ್ಲೆ ಔರಾದ್ ಪಟ್ಟಣದ ನಳಂದ ಶಾಲೆಯಲ್ಲಿ ಮತದಾನ ಮಾಡಲು ಬಂದಿದ್ದ ಭಗವಂತ ಖೂಬಾ ತಮ್ಮ ಶರ್ಟ್ ಮೇಲೆ ಬಿಜೆಪಿ ಬ್ಯಾಡ್ಜ್ ಧರಿಸಿದ್ದು ಹಾಗೆಯೇ ಮತದಾನಕ್ಕೆ ತೆರಳಿದ್ದರು. ಈ ಹಿನ್ನೆಲೆಯಲ್ಲಿ ಔರಾದ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.