ಬಿಸಿಲ ಬೇಗೆ ಹೆಚ್ಚಾಗಿದ್ದು ಸೆಖೆ ತಡೆಯಲು ಆಗುತ್ತಿಲ್ಲ. ಮನೆಯಲ್ಲಿದ್ದರೆ ಫ್ಯಾನ್ ಅಥವಾ ಎಸಿ ಬಳಸಬಹುದು ಆದರೆ ಹೊರಗಡೆ ಇದ್ದಾಗ ಕೂಲ್ ಆಗಲು ಪರ್ಯಾಯ ಮಾರ್ಗವಿದೆಯಾ ಎಂದು ಯೋಚಿಸುವವರಿಗೆ ಸೋನಿ ಕಂಪನಿ ಹೊಸ ಪ್ರಾಡಕ್ಟ್ ಬಿಡುಗಡೆ ಮಾಡಿದೆ. ಅದುವೇ ರಿಯಾನ್ ಪಾಕೆಟ್ 5 ಬಾಡಿ ಏರ್ ಕಂಡಿಷನರ್. ಇದನ್ನು ನೀವು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. ನಿಮ್ಮ ಶರ್ಟ್‌ನ ಹಿಂಭಾಗದಲ್ಲಿ ಪೋರ್ಟಬಲ್ ಎಸಿಯನ್ನಾಗಿ ಬಳಸಿ ಕೂಲ್ ಆಗಬಹುದು. ಈ ನವೀನ ತಂತ್ರಜ್ಞಾನವು ಸೆಕೆಯಿಂದ ಬಳಲುವವರಿಗೆ ಪರ್ಯಾಯವಾಗಿದೆ.
ರಿಯಾನ್ ಪಾಕೆಟ್ 5 ಬಾಡಿ ಏರ್ ಕಂಡಿಷನರ್ ಅನ್ನು ಏಪ್ರಿಲ್ 23 ರಂದು ಬಿಡುಗಡೆ ಮಾಡಲಾಗಿದೆ. ಇದು ಧರಿಸಬಹುದಾದ ಹವಾಮಾನ ನಿಯಂತ್ರಣ ವ್ಯವಸ್ಥೆಯಾಗಿದ್ದು ಪ್ರಯಾಣದಲ್ಲಿರುವಾಗ ವೈಯಕ್ತಿಕ ಸೌಕರ್ಯಕ್ಕಾಗಿ ಬಳಸಬಹುದಾಗಿದೆ. ಇದರ ಬೆಲೆ 15,000 ರೂ.
ರಿಯಾನ್ ಪಾಕೆಟ್ 5 ಸೆಕೆಗಾಲದಲ್ಲಿ ಐದು ಕೂಲಿಂಗ್ ಮಟ್ಟವನ್ನು ಮತ್ತು ತಂಪಾದ ಪರಿಸರದಲ್ಲಿ ನಾಲ್ಕು ವಾರ್ಮಿಂಗ್ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ವೈಶಿಷ್ಟ್ಯವು ಕಿಕ್ಕಿರಿದ ರೈಲುಗಳು ಮತ್ತು ತಂಪಾದ ಏರ್‌ಪ್ಲೇನ್ ಕ್ಯಾಬಿನ್‌ಗಳಂತಹ ವಿವಿಧ ಸನ್ನಿವೇಶಗಳಿಗೆ ಹೊಂದಿಕೊಳ್ಳುವಂತೆ ಮಾಡುತ್ತದೆ. ರಿಯಾನ್ ಪಾಕೆಟ್ ಟ್ಯಾಗ್‌ನೊಂದಿಗೂ ಸಹ ಈ ನೂತನ ಸಾಧನವನ್ನು ಜೋಡಿಸಬಹುದು.
ರಿಯಾನ್ ಪಾಕೆಟ್ ಟ್ಯಾಗ್ ಒಂದು ಸಣ್ಣ ಮತ್ತು ಧರಿಸಬಹುದಾದ ಟ್ಯಾಗ್ ಆಗಿದ್ದು ಅದು ರಿಮೋಟ್ ಸಂವೇದಕದಂತೆ ಕಾರ್ಯನಿರ್ವಹಿಸುತ್ತದೆ. ಈ ಟ್ಯಾಗ್ ನಿಮ್ಮ ಸುತ್ತಮುತ್ತಲಿನ ವಾತಾವರಣವನ್ನು ಪತ್ತೆ ಮಾಡುತ್ತದೆ ಮತ್ತು ಪೂರ್ವಭಾವಿ ತಾಪಮಾನ ಹೊಂದಾಣಿಕೆಗಳಿಗಾಗಿ ವರದಿಯನ್ನು ಕುತ್ತಿಗೆಯ ಭಾಗಕ್ಕೆ ಕಳುಹಿಸುತ್ತದೆ. ರಿಯಾನ್ ಪಾಕೆಟ್ 5 ನಿಮ್ಮ ದೇಹದ ಉಷ್ಣತೆಯ ಮೇಲೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ರಿಯಾನ್ ಟ್ಯಾಗ್ ನಿಮಗೆ ವೈಯಕ್ತಿಕ ಸೌಕರ್ಯಗಳಿಗೆ ಹೆಚ್ಚು ಸಮಗ್ರವಾದ ವಿಧಾನವನ್ನು ಒದಗಿಸುತ್ತದೆ.
ರಿಯಾನ್ ಪಾಕೆಟ್ 5 ಖರೀದಿಸಲು ನೀವು ಈಗ ಸೋನಿಯ ವೆಬ್‌ಸೈಟ್‌ನಲ್ಲಿ 15,000 ರೂ. ವೆಚ್ಚದಲ್ಲಿ ಮುಂಗಡವಾಗಿ ಆರ್ಡರ್ ಮಾಡಬಹುದು. ಮೇ 15 ರಂದು ವಿತರಣೆ ಶುರುವಾಗುತ್ತದೆ. ರಿಯಾನ್ 5 ಟಿ ಪ್ಯಾಕೇಜ್ ರಿಯಾನ್ ಪಾಕೆಟ್ 5, ರಿಯಾನ್ ಪಾಕೆಟ್ ಟ್ಯಾಗ್ ಮತ್ತು ಬಿಳಿ ನೆಕ್‌ಬ್ಯಾಂಡ್ ಅನ್ನು ಹೊಂದಿರುತ್ತದೆ.