
ಸಾಮಾಜಿಕ ಜಾಲತಾಣಗಳಲ್ಲಿ ಮಾರ್ಪಡಿಸಲಾದ ಹಲವು ವಿಡಿಯೋ ಹಾಗೂ ಫೋಟೋಗಳು ಹರಿದಾಡುತ್ತಲೇ ಇರುತ್ತವೆ. ಅದರಲ್ಲೂ ಲೋಕಸಭಾ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಜಕಾರಣಿಗಳ ವಿಡಿಯೋ ಹಾಗೂ ಫೋಟೋಗಳು ಹೆಚ್ಚು ವೈರಲ್ ಆಗುತ್ತವೆ.
ಈಗ ಇದೇ ರೀತಿಯ ವೈರಲ್ ಮೆಮೆ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. ಇದರಲ್ಲಿ ನರೇಂದ್ರ ಮೋದಿಯವರು ನೃತ್ಯ ಮಾಡುತ್ತಿರುವಂತೆ ಬಿಂಬಿಸಲಾಗಿದ್ದು, ಫುಲ್ ವೈರಲ್ ಆಗಿದೆ.
ಇದೇ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ನರೇಂದ್ರ ಮೋದಿಯವರು, ಇದನ್ನು ನಾನೂ ಕೂಡ ಎಂಜಾಯ್ ಮಾಡಿದೆ. ಇದನ್ನು ಸೃಷ್ಟಿಸಿದವರ ಕ್ರಿಯೇಟಿವಿಟಿ ನಿಜಕ್ಕೂ ಅದ್ಭುತ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಮಾರ್ಪಡಿಸಲಾದ ಫೋಟೋ ಹಾಗೂ ವಿಡಿಯೋಗಳನ್ನು ಕೂಡ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ಪಶ್ಚಿಮ ಬಂಗಾಳ ಪೊಲೀಸರು ಇದನ್ನು ಸೃಷ್ಟಿಸಿದವನ ಬೆನ್ನು ಬಿದ್ದಿದ್ದಾರೆ. ಇದು ನೆಟ್ಟಿಗರಲ್ಲಿ ಪರ – ವಿರೋಧದ ಅಭಿಪ್ರಾಯಕ್ಕೆ ಕಾರಣವಾಗಿದ್ದು, ಮೋದಿಯವರು ಕೂಲ್ ಆಗಿ ಈ ವಿಷಯ ತೆಗೆದುಕೊಂಡಂತೆ ಮಮತಾ ಬ್ಯಾನರ್ಜಿ ಕೂಡ ವರ್ತಿಸಲಿ ಎಂದು ಹೇಳಿದ್ದಾರೆ.